ಹರಾರೆ: ಜಿಂಬಾಬ್ವೆ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಟಾಸ್ ಗೆದ್ದ ಕೆಎಲ್ ರಾಹುಲ್ ಪಡೆ ಬೌಲಿಂಗ್ ಆಯ್ದುಕೊಂಡು, ಜಿಂಬಾಬ್ಬೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತ್ತು.
ಜಿಂಬಾಬ್ಬೆಯ ಕೈಟಾನೊ (7) ರನ್‌ಗಳಿಸಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಸೆಂಟ್ ಕೈಯಾ 16 ರನ್ ಗೆ ಶಾರ್ದೂಲ್ ಠಾಕೂರ್ ಔಟ್ ಮಾಡಿದರು. ನಾಯಕ ಚಕಬ್ವಾ (2) ಠಾಕೂರ್ ಎಸೆತದಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಜಿಂಬಾಬ್ವೆಗೆ ಸಿಕಂದರ್ ರಾಜಾ ಹಾಗೂ ಸೀನ್ ವಿಲಿಯಮ್ಸನ್ 30 ರನ್ಗಳ ಜೊತೆಯಾಟ ನೀಡಿ ಆಸರೆಯಾದರು. ಸಿಕಂದರ್ ರಾಜಾ (16) ವಿಕೆಟ್ ನ್ನು ಕಲ್ ದೀಪ್ ಯಾದವ್ ಪಡೆದುಕೊಂಡರು. ಸೀನ್ ವಿಲಿಯಮ್ಸನ್ (42) ರನ್ ಗಳಿಸಿ ಔಟಾದರು.
ಜಿಂಬಾಬ್ಬೆ 38.1 ಓವರ್ ನಲ್ಲಿ 161 ರನ್ ಗಳಿಸಿ ಸರ್ವಪತನವಾಯಿತು.
162 ರ ಸುಲಭ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ನಾಯಕ ನಾಯಕ ಕೆಎಲ್ ರಾಹುಲ್ ಕೇವಲ 1 ರನ್ಗಳಿಸಿ ಔಟಾದರು. ಶುಭ್ ಮನ್ ಗಿಲ್ ಆರಂಭಿಕ ಶಿಖರ್ ಧವನ್ 42 ರನ್ ಜೊತೆಯಾಟ ನೀಡಿ ಚೇತರಿಕೆಯ ಆಟವನ್ನಾಡಿದರು. ಶಿಖರ್ ಧವನ್ 33 ರನ್ ಗೆ ತನ್ನ ಆಟ ಮುಗಿಸಿದದರು.
ಬಳಿಕ ಬಂದ ಇಶಾನ್ ಕಿಶಾನ್ 6 ರನ್ ಗಳಿಸಿ ಔಟಾದರು. 33 ರನ್ಗಳಿಸಿದ್ದ ಶುಭಮನ್ ಗಿಲ್ ಜಾಂಗ್ವೆ ಎಸೆತಕ್ಕೆ ಔಟಾದರು.
97 – 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಕ್ಕೆ ಸಂಜು ಸ್ಯಾಮ್ಸನ್ ಹಾಗೂ ದೀಪಕ್ ಹೂಡಾ ಆಸರೆಯಾದರು.
ಅಂತಿಮವಾಗಿ ಭಾರತ 25. 4 ಓವರ್ ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಆ ಮೂಲಕ ಸರಣಿ ವಶ ಪಡೆದುಕೊಂಡಿದೆ.

