‘ಬನಾರಸ್’ ಚಿತ್ರ ಚಂದನವನದಲ್ಲಿ ಹಿಟ್ ಆಗಿದೆ. ಜಯತೀರ್ಥ ಟೈಮ್ ಟ್ರಾವೆಲ್ ಕಥೆಯನ್ನು ಹೇಳಿ ಗೆದ್ದಿದ್ದಾರೆ. ಸಿನಿ ರಂಗಕ್ಕೂ ಎಂಟ್ರಿಗೂ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡೇ ಚಂದನವನಕ್ಕೆ ಬಂದ ಝೈದ್ ಖಾನ್ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರು ಮನ ಗೆದ್ದಿದ್ದಾರೆ.
ಆ್ಯಕ್ಷನ್ ಹಾಗೂ ಲವರ್ ಬಾಯ್ ಅಗಿ ಮಿಂಚಿದ್ದ ಝೈದ್ ಖಾನ್ ಮೊದಲ ಸಿನಿಮಾ ಅನ್ನೋದನ್ನು ಬಿಟ್ಟು ನಟಿಸಿದ್ದಾರೆ. ಅವರ ಅಭಿನಯ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಗಮನ ಸೆಳೆದಿದೆ.
ಝೈದ್ ಖಾನ್ ಅವರಿಗೆ ಈಗಾಗಲೇ ಒಳ್ಳೆಯ ಆಫರ್ ಗಳು ಬಂದಿವೆ. ಬಾಲಿವುಡ್ ನಿಂದ ಖ್ಯಾತ ನಿರ್ದೇಶಕರಿಂದ ಆಫರ್ ಬಂದಿದೆ. ಇದಕ್ಕೆ ಝೈದ್ ಖಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅದರೆ ಕನ್ನಡದಲ್ಲಿ ಸಿನಿಮಾವನ್ನು ಮಾಡಿ ಎಂದಿದ್ದಾರಂತೆ. ಹಿಂದಿಯಲ್ಲೇ ಸಿನಿಮಾ ಮಾಡಿದರೆ ಬೇಡ ಎಂದಿದ್ದರಂತೆ
‘ಬನಾರಸ್’ ಹಿಟ್ ಆಗಿದ್ದಕ್ಕೆ ಕನ್ನಡಿಗರಿಗೆ ನಟ ಧನ್ಯವಾದ ಸಲ್ಲಿಸಿದ್ದರು. ಸದ್ಯಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆಯ ಕಡೆ ಹೋಗುವುದಿಲ್ಲ ಎಂದು ಝೈದ್ ಖಾನ್ ಹೇಳಿದ್ದರಂತೆ.
ಶೀಘ್ರದಲ್ಲೇ ಝೈದ್ ಖಾನ್ ಹೊಸ ಚಿತ್ರ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.

