ಸಂತೋಷ್ ಆನಂದರಾಮ್ – ಯುವರಾಜ್ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾದ ಹೊಸ ಅಪ್ಡೇಟ್ ಬಗ್ಗೆ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ರಾಜ್ ಕುಟುಂಬದ ಯಂಗ್ ಜನರೇಷನ್ ನಲ್ಲಿ ಒಬ್ಬರಾಗಿರುವ ಯುವರಾಜ್ ಕುಮಾರ್ ಮೊದಲ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದೆ.ಸಿನಿಮಾದ ಟೈಟಲ್ ಶೀಘ್ರದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಸಂಕ್ರಾಂತಿಗೆ ಸಿನಿಮಾದ ಬಗ್ಗೆ ಹೊಸ ಅಪ್ ಡೇಟ್ ಬರಲಿದೆ ಎಂದು ಹೇಳಲಾಗುತ್ತಿದೆ.
ಸಿನಿಮಾದಲ್ಲಿ ನಾಯಕಿಯಾಗಿ ಮಲಯಾಳಂ ಬೆಡಗಿ ‘ಹೃದಯಂ’ ಚೆಲುವೆ ಕಲ್ಯಾಣಿ ಪ್ರಿಯದರ್ಶನ್ ಅವರು ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಮಾಲಿವುಡ್, ಟಾಲಿವುಡ್, ಕಾಲಿವುಡ್ ನ ಸಿನಿಮಾದಲ್ಲಿ ಹಾಗೂ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಕಲ್ಯಾಣಿ ಪ್ರಿಯದರ್ಶನ್ ಮೊದಲ ಬಾರಿ ಯುವರಾಜ್ ಕುಮಾರ್ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಶೀಘ್ರದಲ್ಲಿ ಚಿತ್ರ ತಂಡ ಅಧಿಕೃತ ಹೇಳುತ್ತದೆ ಎನ್ನಲಾಗಿದೆ.

