ಯೋಗರಾಜ್ ಭಟ್ – ಶಿವರಾಜ್ ಕಾಂಬಿನೇಷನ್ ನಲ್ಲಿ ಚಿತ್ರ ಬರುತ್ತಿರುವುದು ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ.


ಯೋಗರಾಜ್ ಭಟ್ ‘ಗಾಳಿಪಟ – 2’ ಬಳಿಕ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಅವರನ್ನು ಮುಖ್ಯಭೂಮಿಕೆಯಲ್ಲಿಟ್ಟು ಚಿತ್ರ ಮಾಡಲಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಚಿತ್ರೀಕರಣ ಕೆಲ ದಿನಗಳ ಹಿಂದೆ ಆರಂಭವಾಗಿತ್ತು. ಸೆಟ್ ನಲ್ಲಿ ಶಿವಣ್ಣ – ಪ್ರಭುದೇವ ಕಾಣಿಸಿಕೊಂಡಿದ್ದರು. ಆದರೆ ಚಿತ್ರದ ಟೈಟಲ್ ಮಾತ್ರ ಅಂತಿಮವಾಗಿರಲಿಲ್ಲ.
ಈಗ ಯೋಗರಾಜ್ ಭಟ್ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ‘ಕರಟಕ ದಮನಕ’ ಎಂದು ಟೈಟಲ್ ಇಡಲಾಗಿದ್ದು, ನಿರ್ದೇಶಕರು ಸೋಶಿಯಲ್ ಮೀಡಿಯಾ ಶೀರ್ಷಿಕೆ ಹರಿಬಿಟ್ಟು, ಕುತೂಹಲ ಹಾಗೂ ಪ್ರಶ್ನೆಗಳನ್ನು ಬಿಟ್ಟಿದ್ದಾರೆ. ಉಪೇಂದ್ರ ಅವರ ಹಾಗೆ ಟೈಟಲ್ ನಲ್ಲೇ ತಲೆಗೆ ಹುಳು ಬಿಟ್ಟಿದ್ದಾರೆ.
ರಾಕ್ ಲೈನ್ ಪ್ರೊಡಕ್ಷನ್ ನಿರ್ಮಾಣ, ಯೋಗರಾಜ್ ಭಟ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.



