ಸಮಂತಾ ಅಭಿನಯದ “ಯಶೋದಾ” ಪೋಸ್ಟರ್ ಮೂಲಕ ಗಮನ ಸೆಳೆದಿತ್ತು. ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಪ್ರೇಕ್ಷಕರು ನಿರೀಕ್ಷೆಯನ್ನಿಟ್ಟುಕೊಂಡಿದೆ.
ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರ ನವೆಂಬರ್ 11 ರಂದು ಜಗತ್ತಿನಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಶಿವಲೆಂಕ ಕೃಷ್ಣ ಪ್ರಸಾದ್ ಅವರ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ 14ನೇ ಚಿತ್ರವಾಗಿ ಯಶೋದಾ ಚಿತ್ರ ನಿರ್ಮಾಣವಾಗುತ್ತಿದೆ. ಹರಿ-ಹರೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತಾನಾಡುವ ಶಿವಲೆಂಕ ಕೃಷ್ಣಪ್ರಸಾದ್ ಇದೊಂದು ಭಿನ್ನವಾದ, ಹೊಸ ಬಗೆಯ ಆ್ಯ ಕ್ಷನ್ ಥ್ರಿಲ್ಲರ್ ಸಿನಿಮಾ. ಪ್ರೇಕ್ಷಕರನ್ನು ಕುತೂಹಲದಿಂದ ಕಡೆಯವರೆಗೂ ಸೀಟಿನ ತುದಿಯಲ್ಲಿ ಈ ಸಿನಿಮಾ ತಂದು ಕೂರಿಸುತ್ತದೆ. ಸಮಂತಾ ಚಿತ್ರದ ಸಾಹಸ ದೃಶ್ಯಕ್ಕಾಗಿ ತುಂಬಾ ಪರಿಶ್ರಮ ಪಟ್ಟಿದ್ದಾರೆ. ತೆಲುಗು ಮಾತ್ರವಲ್ಲದೇ ತಮಿಳುನಲ್ಲೂ ಚಿತ್ರಕ್ಕಾಗಿ ನಟಿ ಸಮಂತಾ ಡಬ್ ಮಾಡಿದ್ದಾರೆ ಎಂದು ಹೇಳಿದರು.


ಈ ಚಿತ್ರಕ್ಕೆ ಮಣಿಶರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅದ್ಧೂರಿ ಬಜೆಟ್ ನಲ್ಲಿ ಚಿತ್ರ ಮೂಡು ಬಂದಿದೆ. ಈ ಚಿತ್ರದಲ್ಲಿ ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ʼಯಶೋದಾʼಚಿತ್ರಕ್ಕೆ ಎಂ. ಸುಕುಮಾರ್ ಛಾಯಾಗ್ರಹಣ ಮಾಡಿದ್ದು, ಪುಲಗಂ ಚಿನ್ನಾರಾಯಣ ಮತ್ತು ಡಾ ಚಲ್ಲ ಭಾಗ್ಯಲಕ್ಷ್ಮೀ ಅವರ ಸಂಭಾಷಣೆ ಮತ್ತು ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

