HomeExclusive Newsಯಶ್‌19 ಗೆ ಜೊತೆಯಾಯಿತು ಕೆವಿಎನ್‌ ಪ್ರೂಡಕ್ಷನ್ಸ್:‌ ಕೋಟಿ ಕೋಟಿ ಬಜೆಟ್‌ ನಲ್ಲಿ ಬಿಗ್‌ ಸಿನಿಮಾ

ಯಶ್‌19 ಗೆ ಜೊತೆಯಾಯಿತು ಕೆವಿಎನ್‌ ಪ್ರೂಡಕ್ಷನ್ಸ್:‌ ಕೋಟಿ ಕೋಟಿ ಬಜೆಟ್‌ ನಲ್ಲಿ ಬಿಗ್‌ ಸಿನಿಮಾ

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂದಿನ ಸಿನಿಮಾ ಯಾವುದೆನ್ನುವ ಕುತೂಹಲ ತೆರೆ ಬಿದ್ದಿದೆ. ಯಶ್‌ 19ನೇ ಸಿನಿಮಾವನ್ನು ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆವಿಎನ್‌ ಪ್ರೂಡಕ್ಷನ್ಸ್‌ ನಿರ್ಮಾಣ ಮಾಡುತ್ತಿದೆ.

ಈ ಹಿಂದೆ ಕನ್ನಡದಲ್ಲಿ ʼಆರ್‌ ಆರ್‌ ಆರ್‌ʼ ಸಿನಿಮಾವನ್ನು ವಿತರಣೆ ಮಾಡಿ, ʼವಿಕ್ರಾಂತ್‌ ರೋಣʼ, ʼಬೈ ಟು ಲವ್‌ʼ, ʼಸಖತ್‌ʼ, ʼರೈಡರ್‌ʼನಂತಹ ಹಿಟ್‌ ಚಿತ್ರಗಳನ್ನು ನಿರ್ಮಾಣ ಮಾಡಿ ಸೈಎನ್ನಿಸಿಕೊಂಡಿರುವ ಕೆವಿಎನ್‌ ಪ್ರೂಡಕ್ಷನ್ಸ್‌ ಸದ್ಯ ಧ್ರುವ ಸರ್ಜಾ- ಜೋಗಿ ಪ್ರೇಮ್‌ ಅವರ ʼಕೆಡಿʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ಇದೀಗ ಕೆವಿಎನ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ಅವರ ಸಿನಿಮಾಕ್ಕೆ ಬಂಡವಾಳ ಹಾಕಲು ರೆಡಿಯಾಗಿದೆ. ಯಶ್‌ ಅವರು ಕೆವಿಎನ್‌ ಪ್ರೂಡಕ್ಷನ್ಸ್‌ ನ ವೆಂಕಟ್ ಕೊನಂಕಿ ಅವರನ್ನು ಭೇಟಿಯಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ ಆಗಿದೆ. ಯಶ್‌ ಅವರ 19ನೇ ಸಿನಿಮಾವನ್ನು ಕೆವಿಎನ್‌ ನಿರ್ಮಾಣ ಮಾಡುತ್ತದೆ ಎಂದೇ ಟ್ರೆಂಡ್‌ ಆಗಿದೆ.

ಅಂದಹಾಗೆ ಈ ಬಾರಿ ಯಶ್‌ ಅವರು ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ. ಆರೆ ಅಭಿಮಾನಿಗಳಿಗೆ ಯಶ್‌ ಮುಂದಿನ ಸಿನಿಮಾದ ಅಪ್ಡೇಟ್‌ ಕೇಳಿ ಖುಷಿಯಾಗಿದೆ.

RELATED ARTICLES

Most Popular

Share via
Copy link
Powered by Social Snap