ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ -2 ಸಿನಿಮಾದ ಬಳಿಕ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಈಗಲೂ ಅಧಿಕೃತವಾಗಿಲ್ಲ. ಅವರ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾದ ಬಗ್ಗೆ ಘೋಷಣೆ ಆಗಬಹುದೆಂದು ಅಭಿಮಾನಿಗಳು ಊಹಿಸಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರುಗಳಿಸಿರುವ ಯಶ್ ಅವರೊಂದಿಗೆ ಫಿಲ್ಮ್ ಕಂಪ್ಯಾನಿಯನ್ ವಿಶೇಷ ಸಂದರ್ಶನವನ್ನು ನಡೆಸಿದೆ. ಈ ವೇಳೆ ಯಶ್ ಬಾಲಿವುಡ್ ಸಿನಿಮಾರಂಗದ ಬಗ್ಗೆ ಮಾತಾನಾಡಿದ್ದಾರೆ.
ನಾವು ಮೊದಲು ಬೇರೆ ಸಿನಿಮಾರಂಗದ ಬಗ್ಗೆ ಹಗುರವಾಗಿ ಮಾತಾನಾಡುವುದನ್ನು ನಿಲ್ಲಿಸಬೇಕು. ಉತ್ತಮ ಕಲಾವಿದರು ಹಾಗೂ ಸಿನಿಮಾಗಳನ್ನು ಮಾಡುವವರನ್ನು ಗೌರವಿಸಬೇಕು. ಬೇರೆ ಸಿನಿಮಾರಂಗವನ್ನು ನೋಡಿ ನಾವು ಹೊಟ್ಟೆ ಕಿಚ್ಚು ಪಡಬಾರದು. ನಾವೇ ಉತ್ತಮವೆಂದು ಭಾವಿಸಿ ಸುಮ್ಮನೆ ಕೂರಬಾರದು. ಪೈಪೋಟಿ ನೀಡಬೇಕಂದಿದ್ದಾರೆ.
ಕನ್ನಡ ಸಿನಿ ರಸಿಕರು ಬೇರೆ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಬಾರದು, ನಾವು ಹಿಂದೆ ಉಳಿದಿದ್ದಾಗ ಹೀಯಾಳಿಸಿದ್ರು ಎಂಬ ಕಾರಣಕ್ಕೆ ನಾವು ಬೆಳೆದು ಗೌರವ ಪಡೆದುಕೊಂಡ ನಂತರ ಬೇರೆ ಚಿತ್ರರಂಗವನ್ನು ಹೀಯಾಳಿಸುವುದು ಸರಿಯಲ್ಲ, ನಾವು ಎಲ್ಲರನ್ನೂ ಗೌರವಿಸಬೇಕು ಎಂದಿದ್ದಾರೆ.

