ಸೆಲೆಬ್ರಿಟಿಗಳ ಹೆಸರಿನಲ್ಲಿ ಹತ್ತಾರು ಅಕೌಂಟ್ ಗಳು ಕ್ರಿಯೇಟ್ ಆಗಿರುತ್ತವೆ. ತನ್ನ ಮೆಚ್ಚಿನ ನಟ, ನಟಿಯರ ಫೋಟೋ , ಕೆಲವೊಮ್ಮೆ ಎಕ್ಸ್ ಕ್ಲೋಸಿವ್ ವಿಷಯಗಳನ್ನು ಅಭಿಮಾನಿಗಳು ಆ ಅಕೌಂಟ್ ಗಳ ಮೂಲಕ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಇವುಗಳಲ್ಲಿ ಕೆಲ ವಿಷಯಗಳು ಸುಳ್ಳಾಗಿರುತ್ತದೆ.
ಸ್ಟಾರ್ ನಟ ಯಶ್ ಅವರಿಗೆ ಪ್ಯಾನ್ ಇಂಡಿಯಾ,ಗ್ಲೋಬಲ್ ಲೆವೆಲ್ ನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ವಿದೇಶ ಪ್ರವಾಸ ಮುಗಿಸಿ, ಹಾಯಾಗಿ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ ಯಶ್.
ಯಶ್ ಅವರ ಬಗ್ಗೆ ಒಂದು ಸುಳ್ಳು ಸುದ್ದಿ ವೈರಲ್ ಆಗಿದೆ. ಇತ್ತೀಚೆಗೆ ಯಶ್ ಅವರು ಅಯೋಧ್ಯೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ರಾಮ ಮಂದಿರದ ನಿರ್ಮಾಣಕ್ಕೆ 50 ಕೋಟಿ ರೂಪಾಯಿಯನ್ನು ದಾನವಾಗಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹಾಗೂ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.


ಯಶ್ ಅವರು ತಮ್ಮ ‘ಯಶೋಮಾರ್ಗ’ ದ ಮೂಲಕ ನೂರಾರು ಮಂದಿಗೆ ಆಸರೆ ಆದದ್ದು ಗೊತ್ತಿರುವ ವಿಚಾರ.
ಅಯೋಧ್ಯೆ ಭೇಟಿ ಸುದ್ದಿ ವೈರಲ್ ಆಗುತ್ತಿದ್ದಂತೆ, ಇದರ ಬಗ್ಗೆ ಚರ್ಚೆಗಳಾಗಿವೆ. ಆಗ ಅಸಲಿಯತ್ತು ರಿವೀಲ್ ಆಗಿದೆ. ಯಶ್ ಕೆಜಿಎಫ್ – 2 ಬಿಡುಗಡೆಗೂ ಮುನ್ನ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಲಿಕ್ಕಾದ ಫೋಟೋವನ್ನೇ ಬಳಸಿಕೊಂಡು ಯಾರೋ ಇದನ್ನು ಅಯೋಧ್ಯೆಗೆ ಭೇಟಿ ನೀಡಿದ್ದ ಫೋಟೋ ಎಂದು ಸುಳ್ಳು ಸುದ್ದಿಯಾಗಿ ಹಬ್ಬಿಸಿದ್ದಾರೆ.
ಸದ್ಯ ಯಶ್ ಅವರ ಮುಂದಿನ ಚಿತ್ರದ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

