HomeNewsಯಶ್ ಬಾಲ್ಯದ ಫೋಟೋ ವೈರಲ್: ಪ್ಯಾನ್ ಇಂಡಿಯಾ ಸ್ಟಾರ್ ಆಗ ಹೇಗಿದ್ರು ನೋಡಿ

ಯಶ್ ಬಾಲ್ಯದ ಫೋಟೋ ವೈರಲ್: ಪ್ಯಾನ್ ಇಂಡಿಯಾ ಸ್ಟಾರ್ ಆಗ ಹೇಗಿದ್ರು ನೋಡಿ

ರಾಕಿಂಗ್ ಸ್ಟಾರ್ ಕೆಜಿಎಫ್ -2 ಮುಂದೆ ಯಾವ ಸಿನಿಮಾ ‌ಮಾಡಲಿದ್ದಾರೆ ಎನ್ನುವುದು ಈಗ ಕುತೂಹಲ. ದಿನಂಪ್ರತಿ ಅಭಿಮಾನಿಗಳು ಅವರ ಮುಂದಿನ ಸಿನಿಮಾದ ಸುದ್ದಿಗಾಗಿ ಕಾಯುತ್ತಿದ್ದಾರೆ.


ಇತ್ತೀಚೆಗಷ್ಟೇ ಕುಟುಂಬದೊಂದಿಗೆ ವಿದೇಶ ಸುತ್ತಿ ಬಂದ, ಈಗ‌ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅವರ 19 ನೇ ಚಿತ್ರದ ಪೋಸ್ಟರ್ ವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ‌ಅದನ್ನು ಅಭಿಮಾನಿಯೊಬ್ವರು ಮಾಡಿದ್ದರೂ, ಆ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


ಕೆಜಿಎಫ್ ನಲ್ಲಿ ಇಡೀ ಪ್ರಪಂಚವೇ ಬೇಕು ಎನ್ನುವ ಬಾಲಕ ರಾಕಿ ನಿಜ ಜೀವನದಲ್ಲಿ ಒಂದೇ ಸಮನೇ ಯಶಸ್ಸಿನ ಉತ್ತುಂಗಕ್ಕೇರಿದವರಲ್ಲ. ಕಷ್ಟ ಪಟ್ಟು ಅವಕಾಶಕ್ಕಾಗಿ ‌ಒಂದೊಂದೇ ದಿನ ಕಳೆದವರು ಯಶ್. ಮೈಸೂರುನಿಂದ ಬೆಂಗಳೂರಿಗೆ ಬಂದು ಇಲ್ಲಿ ಅವಕಾಶವೆಂಬ ಆಕಾಶದಲ್ಲಿ ನೆಲೆಯೂರುವ ಪ್ರಯತ್ನ ಮಾಡಿದವರು. ಧಾರಾವಾಹಿಗಳಲ್ಲಿ ನಟಿಸಿ, ಜರ್ನಿ ಆರಂಭಿಸಿದ ಯಶ್ ಇಂದು ಪ್ಯಾನ್ ಇಂಡಿಯಾದ ದೊಡ್ಡ ಸ್ಟಾರ್.


ಇಂಥ ಬಾಲ್ಯದಲ್ಲಿ ಹೇಗಿರಬಹುದು? ಅವರ ಬಾಲ್ಯದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಾಲಾ ದಿನದಲ್ಲಿ ಗಣ್ಯರಿಂದ ಬಹುಮಾನ ಪಡೆದುಕೊಳ್ಳುತ್ತಿರುವಾಗಿನ ಫೋಟೋ ಇದು. ಈ ಫೋಟೋಗೆ ನೂರಾರು ‌ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.


ಯಶ್ ಅವರ ಮುಂದಿನ ಚಿತ್ರ ನರ್ತನ್ ಅವರೊಂದಿಗೆ ಎಂದು ಹೇಳಲಾಗಿತ್ತು. ಆದರೆ ಅದು ವಿಳಂಬವಾಗಲಿದೆ. ತಮಿಳು ನಿರ್ದೇಶಕ ಶಂಕರ್ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.‌ಆದರೆ ಇದು ಅಧಿಕೃತವಾಗಿಲ್ಲ

RELATED ARTICLES

Most Popular

Share via
Copy link
Powered by Social Snap