ಈ ಬಾರಿ ಭಾರತ ಟಿ-20 ವಿಶ್ವಕಪ್ ನಲ್ಲಿ ಮಹತ್ವದ ಸೆಮಿಫೈನಲ್ ನಲ್ಲಿ ಸೋತಿದೆ. ಕೊಹ್ಲಿ, ರೋಹಿತ್ ನಂತಹ ಆಟಗಾರರು ಮಿಂಚಿದ್ದರೂ ಮಹತ್ವಪೂರ್ಣ ಘಟ್ಟದಲ್ಲಿ ಭಾರತ ಎಡವಿದೆ. ಆ ಮೂಲಕ ಮತ್ತೊಂದು ಐಸಿಸಿ ಟ್ರೋಫಿಯನ್ನು ಗೆಲ್ಲುವುದರಿಂದ ವಂಚಿತವಾಗಿದೆ.
ಎಂ.ಎಸ್.ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2011 ರಲ್ಲಿ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಆ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.
ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಟೀಮ್ ಇಂಡಿಯಾದ ಆಟಗಾರನ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ, ಆತ ವಿಶ್ವಕಪ್ ಗೆಲ್ಲಿಸಿ ಕೊಡಲಿದ್ದಾರೆ ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಆಟಕ್ಕೆ ಕ್ರಿಕೆಟ್ ಜಗತ್ರು ಮನ ಸೋತಿದ್ದು, ಹಲವು ಖ್ಯಾತಾನಾಮರು ಸೂರ್ಯನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಬ್ರೆಟ್ ಲೀ ಯೂಟ್ಯೂಬ್ ಚಾನೆಲ್ ವೊಂದನ್ನು ಮಾಡಿದ್ದಾರೆ. ಭಾರತ ಗೆಲ್ಲದಿರಬಹುದು ಆದರೆ ಆತ ಬೆಳಗಿದ್ದಾನೆ. ನಾನು ಮಾತಾನಾಡುತ್ತಿರುವುದು ಸೂರ್ಯಕುಮಾರ್ ಯಾದವ್ ಬಗ್ಗೆ. ಸೂರ್ಯ ಟಿ20 ಜಗತ್ತಿನ ಹೊಸ ಸೂಪರ್ ಸ್ಟಾರ್. ಆತ ಕಳೆದ 12-15 ತಿಂಗಳಿನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಆತ ನಿರ್ಭಿತಿವುಳ್ಳ ಆತ ಆಟಗಾರ. ಅವರು ರನ್‌ಗಳನ್ನು ಮಾತ್ರವೇ ಗಳಿಸುತ್ತಿಲ್ಲ, ಖಂಡಿತವಾಗಿಯೂ ಮುಂದೊಂದು ದಿನ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿ ಕೊಡಲಿದ್ದಾರೆ. ನೀವು ಏನು ಮಾಡುತ್ತಿದ್ದೀರೋ ಅದನ್ನೇ ಮುಂದುವರಿಸಿ. ಯಾವುದನ್ನು ಬದಲಾಯಿಸಿಕೊಳ್ಳಬೇಡಿ ಎಂದಿದ್ದಾರೆ.

