HomeNewsಸಂದೇಶ್ ನಿರ್ಮಾಣದ ಬಿಗ್ ಬಜೆಟ್ 'Wolf' ಚಿತ್ರೀಕರಣ ಮುಕ್ತಾಯ

ಸಂದೇಶ್ ನಿರ್ಮಾಣದ ಬಿಗ್ ಬಜೆಟ್ ‘Wolf’ ಚಿತ್ರೀಕರಣ ಮುಕ್ತಾಯ

ಪ್ರಭುದೇವ ಅಭಿನಯದ “Wolf” ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯ ಕಂಡಿದೆ. ಬಿಗ್ ಬಜೆಟ್ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್(ಎಂ.ಎಲ್.ಸಿ) ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಡಿಯಲ್ಲಿ ನಿರ್ಮಿಸಿದ್ದಾರೆ.

ಚಿತ್ರದ ಚಿತ್ರೀಕರಣ ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ನಲ್ಲಿ 65 ದಿನಗಳ ಚಿತ್ರೀಕರಣ ನಡೆದಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿನು ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ(ಪುಷ್ಪ ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ತಸಾದ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ಶಂಕರ್ ಲಿಂಗಂ, ಮೈಸೂರು ಸುರೇಶ್ ನಿರ್ಮಾಣ ನಿರ್ವಹಣೆ “wolf” ಚಿತ್ರದ ನಿರ್ಮಾಣ ನಿರ್ವಾಹಕರು.

RELATED ARTICLES

Most Popular

Share via
Copy link
Powered by Social Snap