ಭಾರತ – ವೆಸ್ಟ್ ಇಂಡೀಸ್ ಪಂದ್ಯ ಪ್ರಮುಖ ಸ್ಫೋರ್ಟ್ಸ್ ಚಾನೆಲ್ ಗಳಲ್ಲಿ ಪ್ರಸಾರ ಇಲ್ಲ ಯಾಕೆ? ಇಲ್ಲಿವೆ ಕಾರಣಗಳು
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಮುಕ್ತಾಯ ಕಂಡಿದೆ. ಭಾರತ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿಯಲ್ಲಿ 1-0 ಅಂತರದಲ್ಲಿ ಮುಂದಿದೆ.
ರಾತ್ರಿ 7:00 ಕ್ಕೆ ಆರಂಭವಾದ ಪಂದ್ಯ ಯಾವ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ ಎನ್ನುವುದನ್ನು ತುಂಬಾ ಜನ ಟಿವಿ ಚಾನೆಲ್ ಗಳನ್ನು ಬದಲು ಮಾಡುತ್ತಾ ನೋಡಿದ್ದಾರೆ. ಆದರೆ ಯಾವ ಪ್ರಮುಖ ಸ್ಪೋಟ್ಸ್ ಚಾನೆಲ್ ನಲ್ಲಿ ಪಂದ್ಯ ನೇರ ಪ್ರಸಾರವಾಗುತ್ತಿರುವುದು ಕಾಣದೇ ಇದ್ದಾಗ ಕ್ರಿಕೆಟ್ ಅಭಿಮಾನಿಗಳು ನಿರಾಶರಾಗಿದ್ದಾರೆ.


ಯಾಕೆ ಭಾರತದ ಸರಣಿ ನೇರ ಪ್ರಸಾರವಾಗುತ್ತಿಲ್ಲ ಎನ್ನುವ ವೀಕ್ಷಕರ ಪ್ರಶ್ನೆಗೆ ಕಾರಣಗಳು ರಿವೀಲ್ ಆಗಿವೆ. ವೆಸ್ಟ್ ಇಂಡೀಸ್ ನಲ್ಲಿ ಪಂದ್ಯ ನಡೆಯುವಾಗ ಭಾರತದಲ್ಲಿ ರಾತ್ರಿಯ ಸಮಯ. ಹೆಚ್ಚೆಂದರೆ 10 ಗಂಟೆಯವರೆಗೆ ಜನ ಮ್ಯಾಚ್ ನೋಡಬಹುದು. ಆದರೆ ಮ್ಯಾಚ್ ಮುಗಿಯುವಾಗ ತಡರಾತ್ರಿ ಆಗುತ್ತದೆ. ಆಗ ಜನ ಹೆಚ್ಚು ಟಿವಿ ನೋಡಲ್ಲ. ಇದರಿಂದ ಆದಾಯ ಬರಲ್ಲ ಎನ್ನುವುದು ಒಂದು ಕಾರಣವಾದರೆ, ಇದೇ ಕಾರಣದಿಂದ ಪ್ರಮುಖ ಸ್ಪೋರ್ಟ್ಸ್ ಚಾನೆಲ್ ಪಂದ್ಯದ ಪ್ರಸಾರ ಹಕ್ಕನ್ನು ಖರೀದಿಸಿಲ್ಲ.
ಭಾರತದಲ್ಲಿ ವೆಸ್ಟ್ ಇಂಡೀಸ್ ಸರಣಿಯ ಪಂದ್ಯವನ್ನು ನೋಡಬೇಕಾದರೆ ಮೊಬೈಲ್ ನಲ್ಲಿ ಫ್ಯಾನ್ ಕೋಡ್ ಆಪ್ಲೀಕೇಶನ್ ಡೌನ್ ಲೋಡ್ ಮಾಡಿಕೊಂಡು ಅದರ ಚಂದಾದಾರ ಆಗಬೇಕಾಗುತ್ತದೆ. ಇಲ್ಲದಿದ್ರೆ ಡಿ.ಡಿ ಸ್ಟೋರ್ಟ್ಸ್ ಚಾನೆಲ್ ನಲ್ಲಿ ಮನೆಯಲ್ಲಿ ಕೂತು ಪಂದ್ಯ ವೀಕ್ಷಿಸಬಹುದು.



