

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಏಕದಿನ ಪಂದ್ಯ ರೋಚಕವಾಗಿ ಮುಕ್ತಾಯವಾಗಿದ್ದು, ಲಾಸ್ಟ್ ಓವರ್ ಥ್ರಿಲ್ಲರ್ ನಲ್ಲಿ ಭಾರತ ಗೆದ್ದು ಬೀಗಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ಆರಂಭಿಕರಾದ ಶಿಖರ್ ಧವನ್ – ಶುಭ್ಮನ್ ಗಿಲ್ ಉತ್ತಮ ಜತೆಯಾಟಕ್ಕೆ ಸಾಕ್ಷಿಯಾಯಿತು. ಈ ಜೋಡಿ 119 ರನ್ ಗಳನ್ನು ನೀಡಿತು. ಗಿಲ್ 64 ರನ್ ಗಳಿಸಿ ರನೌಟಾದರೆ, ಧವನ್ 97 ರನ್ ಗಳಿಸಿ ಕ್ಯಾಚ್ ಕೊಟ್ಟು ಔಟಾದರು.
ಮಿಡಲ್ ಆರ್ಡರ್ ನಲ್ಲಿ ಶ್ರೇಯಸ್ ಅಯ್ಯರ್ 54 ರನ್ ಗಳಿಸಿದರು. ಆದರೆ ಆ ಬಳಿಕ ಬ್ಯಾಟರ್ ಗಳು ಕ್ರಿಸ್ ನಲ್ಲಿ ಜಾಸ್ತಿ ಹೊತ್ತು ನಿಲ್ಲಿಲ್ಲ.
ಟೀಮ್ ಇಂಡಿಯಾ 50 ಓವರ್ ನಲ್ಲಿ ಭಾರತ ನೀಡಿದ 308 ರನ್ ಗಳಿಸಿ, 309 ರನ್ ಗಳ ಟಾರ್ಗೆಟ್ ನೀಡಿತು.
ಭಾರತದ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ನ ಆಟಗಾರರು ಉತ್ತಮ ಆರಂಭವನ್ನು ನೀಡಿದರು.


ಕೈಲ್ ಮೇಯರ್ಸ್ 75 ರನ್ ಗಳಿಸಿದ್ರೆ, ಶಮ್ರಾಹ್ ಬ್ರೂಕ್ಸ್ 46 ರನ್ ಮತ್ತು ಬ್ಯಾಂಡನ್ ಕಿಂಗ್ 54 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ ಬಂದ ರೊಮಾರಿಯೊ ಶೆಫರ್ಡ್ ಸ್ಫೋಟಕವಾಗಿ ಬ್ಯಾಟ್ ಬೀಸಿದರು.
ಕೊನೆಯ ಓವರ್ ನಲ್ಲಿ ಪಂದ್ಯ ಸಮಬಲವಾಗಲು 14 ರನ್ ಗಳ ಅವಶ್ಯಕತೆ ಇತ್ತು. ಎಸೆತಗಾರಿಕೆಯಲ್ಲಿದದ್ದು ಮೊಹಮ್ಮದ್ ಸಿರಾಜ್. ಸಿರಾಜ್ ವೈಡ್ ಬಾಲ್ ವೊಂದನ್ನು ಎಸೆದಾಗ ಕೀಪರ್ ಸ್ಯಾಮ್ಸನ್ ಫ್ಲೆಜ್ಡ್ ಡ್ರೈವ್ ಹೊಡೆದು 5 ರನ್ ಕಡೆ ಹೋಗುತ್ತಿದ್ದ ಬಾಲ್ ತಡೆದು ತಂಡದ ಗೆಲುವಿಗೆ ಮಹತ್ವದ ಪಾತ್ರ ವಹಿಸಿದರು.
ಅಂತಿಮವಾಗಿ 2 ಎಸೆತ 7 ರನ್ ಬೇಕಾಯಿತು. ನಿಕೋಲಸ್ ಪೂರನ್ ಪಡೆ 50 ಓವರ್ ನಲ್ಲಿ 305 ರನ್ ಪೇರಿಸಿ 6 ವಿಕೆಟ್ ಗಳನ್ನು ಕಳೆದುಕೊಂಡು ರೋಚಕ ಪಂದ್ಯದಲ್ಲಿ ಭಾರತಕ್ಕೆ ಶರಣಾಯಿತು.



