HomeSportsಇಂದಿನಿಂದ ದೈತ್ಯ ವಿಂಡೀಸ್ ವಿರುದ್ಧ ಟಿ - ಟ್ವೆಂಟಿ ಸರಣಿ : ರೋಹಿತ್ ಪಡೆ ಬಲಿಷ್ಠ

ಇಂದಿನಿಂದ ದೈತ್ಯ ವಿಂಡೀಸ್ ವಿರುದ್ಧ ಟಿ – ಟ್ವೆಂಟಿ ಸರಣಿ : ರೋಹಿತ್ ಪಡೆ ಬಲಿಷ್ಠ

ಟ್ರನಿಡಾಡ್ : ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಅವರ ನೆಲದಲ್ಲೇ‌ ಏಕದಿನ‌ ಸರಣಿಯನ್ನು ಕ್ಲೀನ್ ಸ್ವೀಪ್ ಮೂಲಕ ಗೆದ್ದಿದೆ. ಈಗ ಟಿ – ಟ್ವೆಂಟಿಯ‌ ಸಮಯ.


ಶಿಖರ್ ಧವನ್ ನಾಯಕತ್ವದಲ್ಲಿ ಭಾರತ‌‌ ಪ್ರಮುಖ ಆಟಗಾರರ ಗೈರಲ್ಲಿ ವಿಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ‌ ಜಯ ಸಾಧಿಸಿದೆ‌. ಇಂದಿನಿಂದ ಚುಟುಕು ಕ್ರಿಕೆಟ್ ನ್ನು ಆಡಲಿದೆ‌. ಧವನ್ ಈ ಮಾದರಿಯಲ್ಲಿ ಆಯ್ಕೆ ಆಗಿಲ. ತಂಡಕ್ಕೆ ರೋಹಿತ್ ಮತ್ತೆ ಬರಲಿದ್ದಾರೆ. ಭಾರತ ಪರಿಪೂರ್ಣ ತಂಡವಾಗಿ ಸೆಣಸಾಟ ನಡೆಸಲಿದೆ.



5 ಟಿ – ಟ್ವೆಂಟಿ ಪಂದ್ಯದಲ್ಲಿ ಕಡೆಯ ಎರಡು ‌ಪಂದ್ಯಗಳು‌ ಯುಎಸ್ ಎನಲ್ಲಿ‌ ನಡೆಯಲಿದೆ. ಉಳಿದ ಪಂದ್ಯಗಳು ವಿಂಡೀಸ್ ನೆಲದಲ್ಲೇ ನಡೆಯಲಿದೆ.


ಟಿ- ಟ್ವಿ‌ಂಟಿ‌ ಮಾದರಿಯ ‌ದೈತ್ಯ ತಂಡವಂದೇ ಹೆಸರುವಾಸಿಯಾಗಿರುವ ಕೆರೆಬಿಯನ್ನರು ಏಕದಿನ ಸರಣಿಯ ಸೋಲಿನ‌ ಪ್ರತೀಕಾರವನ್ನು ತೀರಿಸುವ ತಯಾರಿಯಲ್ಲಿದ್ದಾರೆ. ಪೂರನ್ ಪಡೆಯ ಟ್ವೆಂಟಿ ಸ್ಪೆಷೆಲಿಸ್ಟ್ ಬ್ಯಾಟರ್ ಗಳು ಸಿಡಿದು ನಿಂತರೆ ಭಾರತಕ್ಕೆ ಗೆಲುವು ಸುಲಭವಾಗದು ಎಂಬುದನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕು.




ಭಾರತ ಬಲಿಷ್ಠ: ಇನ್ನು ಭಾರತ ಏಕದಿನಗಿಂತ ಹೆಚ್ಚು ಬಲಿಷ್ಠವಾಗಿದೆ. ಕಾರಣ ಈ ಬಾರಿ ಸಂಪೂರ್ಣ ತಂಡವಾಗಿ ಕಣಕ್ಕಿಳಿಯಲಿದೆ. ತಂಡದಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಕಾಣಿಸಿಕೊಳ್ಳಲಿದ್ದು,ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್,
ದೀಪಕ್ ಹೂಡಾ,ಅಕ್ಷರ್ ಪಟೇಲ್‌, ಶ್ರೇಯಸ್ ಅಯ್ಯರ್
ಭುವನೇಶ್ವರ್ ಕುಮಾರ್, ಆರ್‌ ಅಶ್ವಿನ್, ರವಿ ಬಿಷ್ಣೋಯಿ,‌ಕುಲದೀಪ್‌ ಯಾದವ್ ರ‌ಂತಹ ಅನುಭವಿ ಆಟಗಾರರು ಇದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಕೆ.ಎಲ್. ಕೋವಿಡ್ ಕಾರಣದಿಂದ ಹೊರ ಬಿದ್ದಿದ್ದಾರೆ.

RELATED ARTICLES

Most Popular

Share via
Copy link
Powered by Social Snap