

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಗುರಿ ಮುಟ್ಟಿ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್
ಶಾಯ್ ಹೋಪ್ ಅವರ ಭರ್ಜರಿ ಶತಕ (115 ರನ್) ನಾಯಕ ನಿಕೋಲಸ್ ಪೂರನ್ ಅವರ 74 ರನ್, ಮೇಯರ್ಸ್ 39 ರನ್ ಮತ್ತು ಬ್ರೂಕ್ಸ್ 35 ರನ್ ಸಹಾಯದಿಂದ 311 ರನ್ ಗಳಿಸಿ, 312 ರ ಬೃಹತ್ ಟಾರ್ಗೆಟ್ ನ್ನು ಭಾರತಕ್ಕೆ ನೀಡಿತು.
ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ನಾಯಕ ಶಿಖರ್ ಧವನ್ (13 ರನ್ ) ಅವರ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಬಳಿಕ ಕ್ರಿಸ್ ನಲ್ಲಿ ನಿಂತ ಗಿಲ್ (43 ರನ್), ಶ್ರೇಯಸ್ ಅಯ್ಯರ್ (63 ರನ್)ಸಂಜು ಸ್ಯಾಮ್ಸನ್ 54 ರನ್ ಬಾರಿಸಿ ತಂಡಕ್ಕೆ ನೆರವಾದರು.


ಸ್ಯಾಮ್ಸನ್ – ಅಯ್ಯರ್ ಅವರ 99 ರನ್ ಜತೆಯಾಟ ಕೊನೆಗೊಂಡ ಬಳಿಕ ಬಂದ ಎಡಗೈ ಆಟಗಾರ ಅಕ್ಷರ್ ಪಟೇಲ್ 35 ಎಸೆತಗಳಲ್ಲಿ 64 ರನ್ ಗಳನ್ನು ಸಿಡಿಸಿ ಬಿರುಸಿನ ಆಟವನ್ನಾಡಿದರು. ಈ ಇನ್ನಿಂಗ್ಸ್ ಅವರು 5 ಸಿಕ್ಸರ್ ಗಳನ್ನು ಸಿಡಿಸಿದರು.
ಭಾರತ ಕೊನೆಯ 10 ಓವರ್ ನಲ್ಲಿ ರನ್ ಗಳಿಸಿ ವಿಂಡೀಸ್ ವಿರುದ್ದ ಎರಡು ವಿಕೆಟ್ ಅಂತರದ ಗೆಲುವು ಸಾಧಿಸಿ ಏಕದಿನ ಸರಣಿಯನ್ನು ಗೆದ್ದುಕೊಂಡಿತು.
ಈ ಮೂಲಕ ವಿಂಡೀಸ್ ವಿರುದ್ಧ ಸತತ 12 ನೇ ಏಕದಿನ ಸರಣಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ವಿಶ್ವದಾಖಲೆ ಬರೆಯಿತು.



