ಏಷ್ಯಾ ದೇಶಗಳ ಕ್ರಿಕೆಟ್ ಸೆಣಸಾಟ ಏಷ್ಯಾ ಕಪ್ ಇದರ ಏಷ್ಯಾಕಪ್ ನ 15ನೇ ಆವೃತಿಗೆ ದಿನಗಣನೆ ಆರಂಭವಾಗಿದೆ. ಇಂಡೋ – ಪಾಕ್ ಮುಖಾಮುಖಿ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ, ವೇಗಿ ವಾಸಿಂ ಅಕ್ರಂ ಭಾರತೀಯ ಆಟಗಾರನ ಮಾತಾನಾಡಿದ್ದಾರೆ.
ಪ್ರತಿಕಾಗೋಷ್ಟಿಯಲ್ಲಿ ಮಾತಾನಾಡಿದ
ಟೀಮ್ ಇಂಡಿಯಾದಲ್ಲಿ ಕೊಹ್ಲಿ, ರೋಹಿತ್, ರಾಹುಲ್ ರಂತಹ ಬಲಾಢ್ಯ ಆಟಗಾರರು ಇದ್ದಾರೆ.ಆದರೆ ನನ್ನ ಮೆಚ್ಚಿನ ಆಟಗಾರ ಹಾಗೂ ಈ ಬಾರಿ ಪಾಕಿಸ್ತಾನ ಸೇರಿದಂತೆ ಇತರ ತಂಡಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಆಟಗಾರನಿದ್ದರೆ ಅದು ಸೂರ್ಯಕುಮಾರ್ ಯಾದವ್ ಎಂದಿದ್ದಾರೆ
ಸೂರ್ಯಕುಮಾರ್ ಯಾದವ್. ಅವರು 23 ಟಿ-20 ಪಂದ್ಯದಲ್ಲಿ 37.33 ಸರಾಸರಿಯಂತೆ, 5 ಅರ್ಧಶತಕ ಹಾಗೂ 1 ಶತಕದೊಂದಿಗೆ 672 ರನ್ ಗಳನ್ನು ಗಳಿಸಿದ್ದಾರೆ. ನಾನು ಅವರನ್ನು ಕೆಕೆಆರ್ ತಂಡದಲ್ಲಿ ಆಯ್ಕೆಯಾದ ಶುರುವಿನ ದಿನಗಳಲ್ಲಿ ನೋಡಿದ್ದೇನೆ ಅವರೊಬ್ಬ ಅದ್ಭುತ ಆಟಗಾರ ಎಂದಿದ್ದಾರೆ.
ಭಾರತ ತಂಡಕ್ಕೆ ಬಂದಾಗಿನಿಂದ ಸೂರ್ಯ ಕುಮಾರ್ ಆಟ ಅಮೋಘವಾಗಿದೆ. ಸ್ಪಿನ್ನ್ ಹಾಗೂ ವೇಗದ ಬೌಲಿಂಗ್ ನಲ್ಲಿ ಅವರೊಬ್ಬ ಅಪಾಯಕಾರಿ ಆಟಗಾರ. ಒಮ್ಮೆ ಕ್ರೀಸ್ ನಲ್ಲಿ ಸೆಟ್ ಆಗಿ ನಿಂತರೆ ಅವರು, 360 ಡಿಗ್ರಿ ಮಾದರಿ ಆಟಗಾರ.
ಏಷ್ಯಾಕಪ್ ಆ.27 ರಿಂದ ಆರಂಭವಾಗಲಿದೆ. ಭಾರತ ತನ್ನ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆ.28 ರಂದು ಆಡಲಿದೆ.

