ಸಾಹಸ ಸಿಂಹ ವಿಷ್ಣುವರ್ಧನ್ ಕುಟುಂಬದಲ್ಲಿ ಸಂಭ್ರಮ ಕಳೆಗಟ್ಟಿದೆ.ಅದಕ್ಕೆ ಕಾರಣ ವಿಷ್ಣುವರ್ಧನ್ ಕನಸಿನ ಮನೆ ನಿರ್ಮಾಣಗೊಂಡು ಗೃಹ ಪ್ರವೇಶಗೊಂಡಿರುವುದು.
ಜಯನಗರದಲ್ಲಿ ವಿಷ್ಣುವರ್ಧನ್ ಪತ್ನಿ ಭಾರತಿ ಅವರು ಮನೆ ನಿರ್ಮಾಣ ಮಾಡಿದ್ದು, ಈ ಮನೆಯಲ್ಲಿ ಸಾಹಸ ಸಿಂಹ ಅವರ ಹಳೆಯ ನೆನಪುಗಳು ಹಾಗೆಯೇ ಇದೆ. ‘ವಲ್ಮೀಕ’ ಎಂದು ಮನೆಗೆ ಹೆಸರಿಡಲಾಗಿದೆ. ಗೇಟಿನ ಮೇಲೆ ಸಿಂಹದ ಮುಖವನ್ನು ವಿನ್ಯಾಸ ಮಾಡಲಾಗಿದೆ.
ವಲ್ಮೀಕ ಎಂದರೆ ಹಾವಿನ ಹುತ್ತ ಎಂದರ್ಥ.
1976ರಲ್ಲಿ ಈ ಜಾಗವನ್ನು ವಿಷ್ಣು ಖರೀದಿಸಿದ್ದರು. ಕಳೆದ ಮೂರು ವರ್ಷಗಳಿಂದ ಈ ಮನೆಯ ಕೆಲಸ ನಡೆಯುತ್ತಿತ್ತು. ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದೆ ವಿಷ್ಣು ಕುಟುಂಬ.
ಮನೆಯ ಮುಂಭಾಗದಲ್ಲಿ ಕೃಷ್ಣನ ಮೂರ್ತಿ ಇದೆ. ಅದಕ್ಕೆ ಬೆಳ್ಳಿಯ ಮುಖವಾಡ ತೊಡಿಸಿ ಅಲಂಕಾರ ಮಾಡಲಾಗಿದೆ.
ಸಿಎಂ ಬೊಮ್ಮಾಯಿ, ಜಗ್ಗೇಶ್ ,ಸುಮಲತಾ ಅಂಬರೀಶ್ ಸೇರಿದಂತೆ ಅನೇಕಾ ಸೆಲೆಬ್ರಿಟಿಗಳು, ಗಣ್ಯರು ಗೃಹ ಪ್ರವೇಶಕ್ಕೆ ಆಗಮಿಸಿದ್ದರು. ಬಂದವರನ್ನೆಲ್ಲಾ ವಿಷ್ಣು ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ.

