ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆ ಇತ್ತೀಚೆಗಷ್ಟೇ ಗೃಹ ಪ್ರವೇಶವಾಗಿತ್ತು.ಜಯನಗರದಲ್ಲಿನ ಹಳೆಯ ಮನೆಗೆ ಹೊಸ ರೂಪ ಕೊಟ್ಟು, ವಿಷ್ಣು ಕುಟುಂಬ ಎಂಟ್ರಿ ಕೊಟ್ಟಿತ್ತು. `ವಲ್ಮೀಕ’ (Valmika) ಎಂದು ಮನೆಗೆ ಹೆಸರಿಡಲಾಗಿತ್ತು.
ಸಿಎಂ ಬೊಮ್ಮಾಯಿ, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಗೃಹ ಪ್ರವೇಶದ ದಿನ ಬಂದು ವಿಷ್ಣು ಕುಟುಂಬಕ್ಕೆ ಶುಭಕೋರಿದ್ದರು.
ವಿಷ್ಣು ಪತ್ನಿ ಭಾರತಿ, ಮಗಳು, ಆಳಿಯ ಅನಿರುದ್ಧ್ ಸಂತಸದಿಂದ ಗಣ್ಯರನ್ನು ಭರಮಾಡಿಕೊಂಡಿದ್ದರು. ಈ ಸುಂದರ ಮನೆಗೆ, ವಿಷ್ಣುದಾದ ಅವರ ಪ್ರೀತಿಯ ಮೇರೆಗೆ ಈಗ ಬಾದ್ ಷಾ ಕಿಚ್ಚ ಹಾಗೂ ಯಶ್ ದಂಪತಿ ಮನೆಗೆ ಭೇಟಿ ನೀಡಿದ್ದಾರೆ.
ವಿಷ್ಣು ಕುಟುಂಬದೊಂದಿಗೆ ಆತ್ಮೀಯವಾಗಿ ಕ್ಷಣಗಳನ್ನು ಕಳೆದು ಫೋಟೋ ತೆಗೆದುಕೊಂಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

