HomeSports72ನೇ ಶತಕದೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ

72ನೇ ಶತಕದೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ

ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯಗಳಿಸಿದೆ.

409 ರನ್ ಗಳಿಸಿದ ಟೀಮ್ ಇಂಡಿಯಾ ಬಹಳ ಸುಲಭ ಬಾಂಗ್ಕಾ ಆಟಗಾರರನ್ನು ‌ಕಟ್ಟಿ ಹಾಕಿ 227 ರನ್ ಅಂತರದಿಂದ ದೊಡ್ಡ ಗೆಲುವು ಸಾಧಿಸಿದೆ.

ಇಡೀ ಪಂದ್ಯದಲ್ಲಿ ಡ್ರೀಮ್ ಟು ವಾಚ್ ಆಗಿ ಕಂಡದ್ದು ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಇಶಾನ್ ಕಿಶನ್ 210 ರನ್ ಗಳಿಸಿ ಅತೀ ವೇಗದಲ್ಲಿ ದ್ವಿಶತಕಗಳಿಸಿದ ಸಾಧನೆ ಮಾಡಿದರೆ, ಇತ್ತ ವಿರಾಟ್ ಕೊಹ್ಲಿ 113 ರನ್ ಗಳಿಸಿ ಏಕದಿನದಲ್ಲಿ 44 ನೇ ಶತಕಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ‌‌ ಅವರ ಟಿ – 20,ಏಕದಿನ,ಟೆಸ್ಟ್ ಎಲ್ಲಾ ಸೇರಿ ಕೊಹ್ಲಿ ಅವರದಿದ್ದು 72 ನೇ ಶತಕ. ಅಂತಾರಾಷ್ಟ್ರೀಯ ಕ್ರಿಕೆಟ್ ಅತೀ ಹೆಚ್ಚು ಶತಕಗಳಿಸಿದ ಆಸ್ಟ್ರೇಲಿಯಾದ ರಿಕಿ‌ ಪಾಂಟಿಂಗ್ ಅವರ ದಾಖಲೆಯನ್ನು ಕೊಹ್ಲಿ ತಮ್ಮ 72 ನೇ ಶತಕದೊಂದಿಗೆ‌ ಮುರಿದಿದ್ದಾರೆ.

ಐವತ್ತು ಓವರ್‌ಗಳ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು (49) ಸರಿಗಟ್ಟಲು ಕೊಹ್ಲಿ ಈಗ ಕೇವಲ 5 ಶತಕಗಳಿಂದ ಹಿಂದೆಯಿದ್ದಾರೆ.

RELATED ARTICLES

Most Popular

Share via
Copy link
Powered by Social Snap