ಟೀಮ್ ಇಂಡಿಯಾ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟಿ-20 ವಿಶ್ವಕಪ್ ಪಯಣ ಮುಗಿಸಿದೆ.
ಹಾರ್ದಿಕ್ ಪಾಂಡ್ಯಾ ಹಾಗೂ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸಾಹಸದಿಂದಲೂ ಇಂಗ್ಲೆಂಡ್ ಆಟಗಾರರನ್ನು ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಈ ಸೋಲಿನ ನಡುವೆಯೂ ಕಿಂಗ್ ಕೊಹ್ಲಿ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯೊಂದನ್ನು ಮಾಡಿದ್ದಾರೆ.
ಟಿ-20 ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆಯ ಪಟ್ಟಿಯನ್ನು ಕೊಹ್ಲಿ ಪಡೆದುಕೊಂಡಿದ್ದಾರೆ.
ಡಿಲೇಡ್‌ನಲ್ಲಿ ಗುರುವಾರ ಅರ್ಧಶತಕ ಬಾರಿಸಿ ಅವರು ಸಾಧನೆಯನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4000 ಸಾವಿರ ರನ್ ಬಾರಿಸಿದ ಏಕೈಕ ಆಟಗಾರನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಗುರುವಾರ ಬಾರಿಸಿದ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ರನ್ ಗಳಿಕೆ 4,008ಕ್ಕೇರಿತು. ಇದುವರೆಗೆ 115 ಪಂದ್ಯಗಳನ್ನಾಡಿರುವ ಕೊಹ್ಲಿ 52.73 ಸರಾಸರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 122 ರನ್ ಗಳಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಇದು ಮಾತ್ರವಲ್ಲದೇ ಕೊಹ್ಲಿ ಸದ್ಯ ಈ ಟಿ-20 ಯಲ್ಲಿ 98.66 ಸರಾಸರಿಯಲ್ಲಿ 296 ರನ್ ಗಳಿಸಿ ಕೂಟದ ಗರಿಷ್ಠ ಸ್ಕೋರರ್ ಕೂಡ ಆಗಿದ್ದಾರೆ.

