ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಗೆ, ಅವರ ವ್ಯಕ್ತಿತ್ವಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಏಷ್ಯಾ ಕಪ್ ಬಳಿಕ ಕೊಹ್ಲಿ ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅವರು ಮತ್ತೆ ಹಿಂದಿನ ಲಯಕ್ಕೆ ಮರಳಿದ್ದಾರೆ. ಟಿ- 20 ವಿಶ್ವಕಪ್ ಗೆ ಇದು ಭಾರತಕ್ಕೆ ದೊಡ್ಡ ಪ್ಲಸ್.
ಆಸ್ಟ್ರೇಲಿಯ ವಿರುದ್ಧ ನಡೆದ ಟಿ-20 ಸರಣಿಯಲ್ಲಿ ಕೊಹ್ಲಿ ಉತ್ತಮ ರೀತಿಯಲ್ಲಿ ಬ್ಯಾಟ್ ಬೀಸಿದ್ದರು. ಏಷ್ಯಾ ಕಪ್ ನಲ್ಲಿ ಪಾಕ್ ವಿರುದ್ಧವೂ ಅಬ್ಬರಿಸಿದ್ದರು.
ಕೊಹ್ಲಿ ಬ್ಯಾಟಿಂಗ್ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಪಾಕ್ ನಲ್ಲೂ ಕೊಹ್ಲಿಯ ಅಭಿಮಾನಿಗಳು ಕಮ್ಮಿಯಿಲ್ಲ. ಅವರ ಬ್ಯಾಟಿಂಗ್ ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಈ ನಡುವೆ ಅಭಿಮಾನಿಯೊಬ್ಬರ ಮನವಿ ವೈರಲ್ ಆಗಿದೆ.
ಪಾಕಿಸ್ತಾನ – ಇಂಗ್ಲೆಂಡ್ ನಡುವಿನ 6ನೇ ಟಿ-20 ಪಂದ್ಯದಲ್ಲಿ ಅಭಿಮಾನಿಯೊಬ್ಬರು ‘ಕೊಹ್ಲಿ ನಿವೃತ್ತಿ ಆಗುವ ಮುನ್ನ ಪಾಕಿಸ್ತಾನದ ನೆಲದಲ್ಲಿ ಕ್ರಿಕೆಟ್ ಆಡಬೇಕು’ ಎಂದು ಬರೆದಿರುವ ಫಲಕ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಈ ಮನವಿ ಫಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಈ ಮನವಿಯ ಕೂಗಿಗೆ ಧ್ವನಿಗೂಡಿಸಿದ್ದಾರೆ.
ಇದುವರೆಗೆ 108 ಟಿ-20 ಪಂದ್ಯ ಹಾಗೂ 262 ಏಕದಿನ ಪಂದ್ಯವನ್ನಾಡಿರುವ ಕೊಹ್ಲಿ ಪಾಕ್ ನೆಲದಲ್ಲಿ ಒಮ್ಮೆಯೂ ಪಂದ್ಯವನ್ನು ಆಡಿಲ್ಲ. ಭಾರತ ಕೊನೆಯ ಬಾರಿ 2006ರಲ್ಲಿ ಪಾಕ್ ಸರಣಿ ಕೈಗೊಂಡಿತ್ತು.

