HomeExclusive Newsಕೋಚ್ ರಾಹುಲ್ ದ್ರಾವಿಡ್ ದಾಖಲೆಯನ್ನೇ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಕೋಚ್ ರಾಹುಲ್ ದ್ರಾವಿಡ್ ದಾಖಲೆಯನ್ನೇ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಕಿಂಗ್ ಕೊಹ್ಲಿ ಆಸೀಸ್ ವಿರುದ್ಧ ತನ್ನ ಪ್ರಚಂಡ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಿದ್ದಾರೆ. 48 ಎಸೆತಗಳಲ್ಲಿ 63 ರನ್ ಗಳನ್ನು ಚಚ್ಚಿದ್ದಾರೆ. ಈ ಇನ್ನಿಂಗ್ಸ್ ನಲ್ಲಿ 3 ಬೌಂಡರಿ 4 ಸಿಕ್ಸರ್ ದಾಖಲಿಸಿದ್ದರು.


ಸೂರ್ಯಕುಮಾರ್ ಯಾದವ್ ಅವರೊಂದಿಗೆ 104 ರನ್ ಜೊತೆಯಾಟ ನೀಡಿದ ಅವರು, ತಂಡದ ಗೆಲುವಿಗೆ ಪ್ರಮುಖ ರಾದರು. ಈ ವೇಳೆ ಕಿಂಗ್ ಕೊಹ್ಲಿ ವೃತ್ತಿ ಬದುಕಿಗೆ ಹೊಸ ದಾಖಲೆಯೂ ಸೇರಿತು.


ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 24,078 ರನ್ ಗಳಿಸಿರುವ ಕೊಹ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ವಾಲ್ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 24064 ರನ್ ಗಳಿಸಿದ್ದಾರೆ. ನಿನ್ನೆ ಸಿಡಿಸಿದ ಅಬ್ಬರದ 63 ರನ್ ಕಿಂಗ್ ಕೊಹ್ಲಿಯ ಹೊಸ ದಾಖಲೆಗೆ ಸಾಕ್ಷಿಯಾಯಿತು.


ಈ ಸಾಲಿನಲ್ಲಿ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ (34,357 ರನ್) ಮೊದಲ ಸ್ಥಾನದಲ್ಲಿದ್ದಾರೆ. ಕುಮಾರ ಸಂಗಕ್ಕಾರ (ಶ್ರೀಲಂಕಾ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಮಹೇಲಾ ಜಯವರ್ಧನಾ (ಎಸ್‌ಎಲ್) ಮತ್ತು ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) ನಂತರದ ಸ್ಥಾನದಲ್ಲಿದ್ದಾರೆ.

RELATED ARTICLES

Most Popular

Share via
Copy link
Powered by Social Snap