ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಸಿನಿಮಾ ʼವಿಕ್ರಾಂತ್ ರೋಣʼ ಥಿಯೇಟರ್ ನಲ್ಲಿ ಅಬ್ಬರಿಸಿ, ಈಗ ಓಟಿಟಿಯಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದೆ.
ಅದ್ಬುತ ಕಲೆಕ್ಷನ್ ಮಾಡಿದ ಅನೂಪ್ ಭಂಡಾರಿ ಅವರ ʼವಿಕ್ರಾಂತ್ ರೋಣ; ಸೆ.2 ರಂದು ಜೀ5 ಓಟಿಟಿಯಲ್ಲಿ ರಿಲೀಸ್ ಆಗಿದೆ.
ಕಲೆಕ್ಷನ್ ವಿಷಯದಲ್ಲಿ ಹಲವು ಸಿನಿಮಾಗಳ ದಾಖಲೆಗಳನ್ನು ಹಿಂದೆ ಹಾಕಿರುವ ಚಿತ್ರ, ಈಗ ಓಟಿಟಿಯಲ್ಲೂ ದಾಖಲೆ ಬರೆದಿದೆ.


ಪೊಲೀಸ್ ತನಿಖಾಧಿಕಾರಿ ಕಿಚ್ಚ ಸುದೀಪ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಗೂಢ ಕೊಲೆ ರಹಸ್ಯವನ್ನು ಬಯಲು ಮಾಡುವ ಅವರ ಪಾತ್ರಕ್ಕೆ ಶಹಬ್ಬಾಸ್ ಗಿರಿ ಸಿಕ್ಕಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾ, ಅನೂಪ್ ಡೈರೆಕ್ಷನ್ ನೋಡುಗರನ್ನು ಥ್ರಿಲ್ ಆಗಿಸಿತ್ತು.
ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯೊಳಗೆ ʼವಿಕ್ರಾಂತ್ ರೋಣʼ 50 ಕೋಟಿ ನಿಮಿಷ ಸ್ಟ್ರೀಮಿಂಗ್ ಆಗಿ ದಾಖಲೆ ಬರೆದು ಸಿನಿಮಾ ಮತ್ತೊಮ್ಮೆ ಸದ್ದು ಮಾಡಿದೆ. ನಿರ್ದೇಶಕ ಅನುಪೂ ಭಂಡಾರಿ ಈ ಸಂತಸವನ್ನು ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಿನಿಮಾದಲ್ಲಿ ನಿರೂಪ ಭಂಡಾರಿ, ನೀತಾ ಅಶೋಕ್,ಮಿಲನಾ ನಾಗರಾಜ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

