ಅನೂಪ್ ಭಂಡಾರಿ ಅವರ ‘ವಿಕ್ರಾಂತ್ ರೋಣ’ ದಕ್ಷಿಣ ಭಾರತದ ಹಿಟ್ ಸಿನಿಮಾಗಳ ಸಾಲಿಗೆ ಸೇರಿದೆ. ಭರ್ಜರಿ ಯಶಸ್ಸು ಕಂಡ ಚಿತ್ರಕ್ಕೆ ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿತ್ತು.
ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ನಾಗಿ ಸರಣಿ ಕೊಲೆಗಳ ಹಿಂದಿನ ರಹಸ್ಯವನ್ನು ಕಂಡು ಹಿಡಿಯುವ ತನಿಖಾಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮಿಲನಾ ನಾಗರಾಜ್,ಮಧುಸೂದನ್ ರಾವ್, ರವಿಶಂಕರ್ ಗೌಡ ಹೀಗೆ ಉಳಿದವರ ಪಾತ್ರವೂ ಗಮನ ಸೆಳೆದಿತ್ತು.
ಅಜನೀಶ್ ಲೋಕನಾಥ್ ನೀಡಿರುವ ಸಂಗೀತ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ..’ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತ್ತು. ಈಗ ಚಿತ್ರ ಸಣ್ಣ ಪರದೆಯಲ್ಲಿ ಬರುವ ಸಮಯ ಬಂದಿದೆ.
ಹೌದು ‘ವಿಕ್ರಾಂತ್ ರೋಣ’ ಓಟಿಟಿಯಲ್ಲಿ ರಿಲೀಸ್ ಬರಲು ಸಿದ್ದವಾಗಿದೆ.
ಒಟಿಟಿ ಹಕ್ಕುಗಳನ್ನು ‘ಜೀ5’ ಸಂಸ್ಥೆ ಖರೀದಿಸಿದ್ದು, ಚಿತ್ರವನ್ನು ಸೆಪ್ಟೆಂಬರ್ 2 ರಂದು ಓಟಿಟಿಯಲ್ಲಿ ರಿಲೀಸ್ ಮಾಡಲಿದೆ.
‘ಗುಮ್ಮ ಬರ್ತಿದ್ದಾನೆ..’ ಎಂದು ಜೀ5 ಪೋಸ್ಟ್ ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

