ಕಿಚ್ಚ ಸುದೀಪ್ ಅವರ ʼವಿಕ್ರಾಂತ್ ರೋಣʼ ಅಬ್ಬರ ಮುಂದುವರೆದಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ. ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಕೂಡ ಸದ್ದು ಮಾಡುತ್ತಿದೆ.
ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್ ಪ್ಯಾನ್ ಇಂಡಿಯಾ ಸಿನಿಮಾ. ನಿರೀಕ್ಷೆಯಂತೆ ಪ್ಯಾನ್ ಇಂಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಎಲ್ಲರೂ ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ.
ಟಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ ಹಾಗೂ ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಒಳ್ಳೆಯ ಸ್ನೇಹಿತರು.


ವಿಕ್ರಾಂತ್ ರೋಣವನ್ನು ರಾಜಮೌಳಿ ವೀಕ್ಷಿಸಿ, ಟ್ವೀಟ್ ಮೂಲಕ ಚಿತ್ರಕ್ಕೆ ತಂಡಕ್ಕೆ ಶುಭ ಹಾರೈಸಿದ್ದಾರೆ. ಅದಲ್ಲದೇ ಚಿತ್ರದ ಪಾತ್ರವೊಂದರ ಬಗ್ಗೆ ವಿಶೇಷವಾದ ಪ್ರೀತಿ ತೋರಿಸಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ಗೆಲುವಿಗಾಗಿ ಕಿಚ್ಚ ಸುದೀಪ್ ಹಾಗೂ ಚಿತ್ರ ತಂಡಕ್ಕೆ ಅಭಿನಂದನೆಗಳು. ಈ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಲು ಧೈರ್ಯದೊಂದಿಗೆ ನಂಬಿಕೆಯೂ ಬೇಕು. ತಮ್ಮ ಶ್ರಮಕ್ಕೆ ಯಶಸ್ಸು ಸಿಕ್ಕಿದೆ. ಚಿತ್ರದ ಪ್ರೀ ಕ್ಲೈಮಾಕ್ಸ್ ದೃಶ್ಯ ಮಹತ್ವವಾದದು. ಗುಡ್ಡಿಯ ಸ್ನೇಹಿತ ಬಾಸ್ಕರ್ ಬಗ್ಗೆ ವಿಶೇಷವಾಗಿ ಹೇಳಲೇ ಬೇಕೆಂದು ಟ್ವೀಟ್ ಮಾಡಿದ್ದಾರೆ.


ಇದಕ್ಕೆ ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿ, ಧನ್ಯವಾದಗಳು ನಿಮ್ಮಿಂದ ಈ ಮಾತುಗಳನ್ನು ಕೇಳಲು ಹೆಮ್ಮೆ ಆಗುತ್ತದೆ. ಭಾಸ್ಕರ್ ಹಾಗೂ ಇಡೀ ಚಿತ್ರ ತಂಡದಿಂದ ನಿಮಗೆ ಪ್ರೀತಿಯ ಅಪ್ಪುಗೆ ಎಂದಿದ್ದಾರೆ.
ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಪ್ರೇಕ್ಷಕರನ್ನು ಸೆಳೆದಿಟ್ಟು ಕೊಳ್ಳುತ್ತದೆ.

