

ಅನೂಪ್ ಭಂಡಾರಿ ಅವರ ಸ್ಯಾಂಡಲ್ ವುಡ್ ನ ಮತ್ತೊಂದು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ.
ದಿಲ್ಲಿ ಸೇರಿದಂತೆ ದೇಶದ ಪ್ರಮುಖ ನಗರದಲ್ಲಿ ಭರ್ಜರಿ ಪ್ರಮೋಷನ್ ನಡೆಸುತ್ತಿರುವ ವಿಕ್ರಾಂತ್ ರೋಣ ಐದು ಭಾಷೆಯಲ್ಲಿ ಇದೇ ಜುಲೈ 28 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.
ಚಿತ್ರದ ರಾರಾ ರಕ್ಕಮ್ಮ, ಗುಮ್ಮ ಹಾಡು ಈಗಾಗಲೇ ಹಿಟ್ ಲಿಸ್ಟ್ ಗೆ ಸೇರಿದ್ದು, ಜನ ಸಾಮಾನ್ಯರ ಬಾಯಿಯಲ್ಲಿ, ಮೊಬೈಲ್ ನಲ್ಲಿ ರಕ್ಕಮ್ಮನದೇ ಹವಾ ಜೋರಾಗಿದೆ.






ಸಾವಿರಾರು ಅಭಿಮಾನಿಗಳ ಬೇಡಿಕೆಯಿತ್ತು ಅದು ಅಡ್ವಾನ್ಸ್ ಬುಕಿಂಗ್ ಆರಂಭಿಸಬೇಕೆನ್ನುವುದು, ಅದರಂತೆ ನಿನ್ನೆ ಕನ್ನಡ ಅವತರಣಿಕೆಯ ಬುಕಿಂಗ್ ಆರಂಭಿಸಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡಿ ಹೇಳಿದ್ದಾರೆ.
ಬೆಂಗಳೂರು , ಮೈಸೂರು ಸೇರಿದಂತೆ ಹಲವು ಕಡೆ ಬುಕ್ ಮೈ ಶೋ ಮೂಲಕ ಶೂಟಿಂಗ್ ಆರಂಭಿಸಿದ್ದು, ಭರ್ಜರಿಯಾಗಿ ಟಿಕೆಟ್ ಬುಕ್ ಆಗುತ್ತಿದೆ.
ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ
ಸದ್ಯದ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 4000 ಸ್ಕ್ರೀನ್ ಗಳಲ್ಲಿ ತೆರೆಕಾಣಲಿದೆ.



