ಕೆಜಿಎಫ್, ಕೆಜಿಎಫ್ -2 ಎರಡು ಸಿನಿಮಾಗಳು ಹೊಂಬಾಳೆ ಫಿಲ್ಮ್ಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೊಸ ಇಮೇಜ್ ತಂದುಕೊಟ್ಟ ಸಿನಿಮಾಗಳು.
ಸಾವಿರ ಕೋಟಿಗೂ ಅಧಿಕ ಗಳಿಕೆ ಕಂಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಷ್ಟು ದೊಡ್ಡ ಹಿಟ್ ಆಗಿತ್ತು ಎಂದರೆ ಸ್ಯಾಂಡಲ್ ವುಡ್ ನತ್ತ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡಿತ್ತು.
ಕೆಜಿಎಫ್ ಸರಣಿಯ ಮೂರನೇ ಭಾಗ ತೆರೆಗೆ ಬರಲಿದೆ. ಯಾವಾಗ ಎನ್ನುವುದಕ್ಕಿಂತ ಮೊದಲೇ ಸಿನಿಮಾದ ಬಗ್ಗೆ ಹೈಪ್ ಈಗಿನಿಂದಲೇ ಶುರುವಾಗಿದೆ.
ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಅವರು ಮಾತಾನಾಡಿದ್ದಾರೆ. ಸಿನಿಮಾ ಸೈಟ್ ನೊಂದಿಗೆ ಮಾತಾನಾಡಿರುವ ಅವರು, ಕೆಜಿಎಫ್ -3 ಶೀಘ್ರದಲ್ಲಿ ಶುರುವಾಗುವುದಿಲ್ಲ . ನಿರ್ದೇಶಕ ಪ್ರಶಾಂತ್ ನೀಲ್ ಅವರು ಬ್ಯುಸಿಯಾಗಿರುವದರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವೂ ಶುರುವಾಗಿಲ್ಲ. 2025 ಕ್ಕೆ ಸಿನಿಮಾ ಸಟ್ಟೇರಿ, 2026. ಕ್ಕೆ ರಿಲೀಸ್ ಆಗಬಹುದೆಂದಿದ್ದಾರೆ.
ಕೆಜಿಎಫ್ -3 ರ ಬಳಿಕವೂ ಸಿನಿಮಾದ ಫ್ರಾಂಚೈಸಿ ಮುಂದುವೆರಯುವ ಸಾಧ್ಯತೆಯಿದೆ. 5 ಭಾಗಗಳವರೆಗೆ ಕೆಜಿಎಫ್ ಬರಬಹುದು. ಜೇಮ್ಸ್ ಬಾಂಡ್ ಸರಣಿಯ ಹಾಗೆ ಸಿನಿಮಾದಲ್ಲಿ ನಾಯಕರು ಬದಲಾಗುವ ಹಾಗೆ ಕೆಜಿಎಫ್ ಮುಂದಿನ ಪಾರ್ಟ್ ಗಳಲ್ಲಿ ರಾಕಿಭಾಯ್ ಪಾತ್ರವನ್ನು ಬೇರೊಬ್ಬ ಹೀರೋ ನಿಭಾಯಿಸುವ ಸಾಧ್ಯತೆಯಿದೆ ಎಂದಿದ್ದಾರೆ.

