ಸಂಕ್ರಾಂತಿ ಹಬ್ಬಕ್ಕೆ ಕಾಲಿವುಡ್ ನಲ್ಲಿ ಧೂಳು ಎಬ್ಬಿಸಿದ ದಳಪತಿ ವಿಜಯ್ ಅವರ ‘ವಾರಿಸು’ ಅಜಿತ್ ಅವರ ‘ತುನಿವು’ ಇನ್ನೂ ಥಿಯೇಟರ್ ನಲ್ಲಿ ಸದ್ದು ಮಾಡುತ್ತಿದೆ. ತಮಿಳುನಾಡಿನ ಕೆಲ ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಫ್ಯಾಮಿಲಿ ಡ್ರಾಮಾ ಕಥೆಯನ್ನೊಳಗೊಂಡ ‘ವಾರಿಸು’ ದಳಪತಿ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿತ್ತು. ಮಾಸ್ & ಕ್ಲಾಸ್ ಅವತಾರದಲ್ಲಿ ವಿಜಯ್ ಮಿಂಚಿದ್ದರು. ಇನ್ನೂ ‘ತುನಿವು’ ಸಿನಿಮಾ ಕೂಡ ಜಬರ್ ದಸ್ತ್ ಆ್ಯಕ್ಷನ್ ನಿಂದ ಮೋಡಿ ಮಾಡಿತ್ತು. ಎರಡೂ ಸಿನಿಮಾಗಳು 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ವಿಶ್ವದಾದ್ಯಂತ ಸೌಂಡ್ ಮಾಡಿದ ಸಿನಿಮಾಗಳು ಈಗ ಓಟಿಟಿಯಲ್ಲಿ ರಿಲೀಸ್ ಆಗಲು ರೆಡಿಯಾಗಿದೆ.
‘ತುನಿವು’ ಫೆ.8 ಕ್ಕೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ಇನ್ನು ದಳಪತಿ ವಿಜಯ್ ಅವರ ‘ವಾರಿಸು’ ಫೆ.22 ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.
ಇನ್ನು ಸಂಕ್ರಾಂತಿ ಸಮಯದಲ್ಲೇ ಟಾಲಿವುಡ್ ನಲ್ಲಿ ರಿಲೀಸ್ ಆಗಿದ್ದ ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ತೇರು ವೀರಯ್ಯ’ ಚಿತ್ರಗಳ ಓಟಿಟಿ ರಿಲೀಸ್ ಡೇಟ್ ಇನ್ನಷ್ಟೇ ಹೊರ ಬೀಳ ಬೇಕಾಗಿದೆ.

