ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಅವರ 67ನೇ ಚಿತ್ರವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನ ಮಾಡಿಲಿದ್ದಾರೆ ಎನ್ನುವ ಕಾಲಿವುಡ್ ಸದ್ದು ಮಾಡಿದೆ. ʼವಿಕ್ರಂʼ ಸಿನಿಮಾದ ಬಳಿಕ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಿರುವ ಕನಗರಾಜ್ ದಳಪತಿ ವಿಜಯ್ ಯೊಂದಿಗೆ ಸಿನಿಮಾ ಮಾಡುತ್ತಿದ್ದಾರೆ.
ಸಿನಿಮಾದ ಬಗ್ಗೆ ಸಾಕಷ್ಟು ಹೈಪ್ ಈಗಿನಿಂದಲೇ ಶುರುವಾಗಿದೆ. ಈಗ ಚಿತ್ರದಲ್ಲಿ ಸ್ಟಾರ್ ನಟಿಯೊಬ್ಬರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.
ಬಹುಭಾಷೆಯಲ್ಲಿ ತನ್ನ ನಟನೆಯ ಮೂಲಕ ಮೋಡಿ ಮಾಡಿರುವ ತ್ರಿಷಾ ಕೃಷ್ಣನ್ ದಳಪತಿ ವಿಜಯ್ ಅವರೊಂದಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ಈ ಹಿಂದೆ ಗಿಲ್ಲಿ, ಕುರುವಿ, ತಿರುಪಾಚಿ ಮತ್ತು ಆಟಿ ಚಿತ್ರದಲ್ಲಿ ವಿಜಯ್ ಹಾಗೂ ತ್ರಿಷಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು.
ಈ ಹಿಟ್ ಜೋಡಿ 14 ವರ್ಷದ ಬಳಿಕ ಮತ್ತೊಮ್ಮೆ ಒಂದೇ ಸ್ಕ್ರೀನ್ ಕಾಣಿಸಿಕೊಳ್ಳುವುದನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಈ ಚಿತ್ರದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇರಲಿದ್ದು ಪೃಥ್ವಿರಾಜ್ ಸುಕುಮಾರನ್ ಮಿಸ್ಕಿನ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಮಾಲಿವುಡ್ ನಟ ನಿವಿನ್ ಪೌಲಿ ಮತ್ತು ತಮಿಳು ಸ್ಟಾರ್ ವಿಶಾಲ್, ಗೌತಮ್ ವಾಸುದೇವ್ ಮೆನನ್,ಸಂಜಯ್ ದತ್ ಕೂಡ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

