ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಈ ಪೈಕಿ ಸದ್ಯದಲ್ಲೇ ಬಿಡುಗಡೆಯಾಗಲಿರೋ ಸಿನಿಮಾ ಅಂದರೇ ಖದರ್ ಕುಮಾರ್ ಅವರ ನಿರ್ದೇಶನದ ‘ವೀರಂ’. ಪಕ್ಕ ಆಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಆಗಿರಲಿರೋ ಈ ಸಿನಿಮಾ ಇದೇ ಏಪ್ರಿಲ್ 7ಕ್ಕೆ ಬೆಳ್ಳಿತೆರೆಗಳ ಮೇಲೆ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಹಾಗು ಹಾಡುಗಳು ಚಿತ್ರದ ಬಗೆಗೆ ಸಿನಿಪ್ರೇಮಿಗಳಲ್ಲಿ ಒಂದು ನಿರೀಕ್ಷೆ ಹುಟ್ಟಿಸಲು ಪೂರಕವಾಗಿದೆ.
‘ವೀರಂ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಚಿತ್ರದ ವಿಲನ್ ಪಾತ್ರಗಳಲ್ಲಿ ಶ್ರೀನಗರ್ ಕಿಟ್ಟಿ ಹಾಗು ಶಿಷ್ಯ ದೀಪಕ್ ಅವರು ನಟಿಸಿದ್ದು, ಸಕತ್ ಪವರ್ ಫುಲ್ ಎದುರಾಳಿಗಳಾಗಿ ಈ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಸಂಪೂರ್ಣ ಆಕ್ಷಮ್ ಸಿನೆಮಾದಲ್ಲಿ ಪ್ರಜ್ವಲ್ ಹಾಗು ರಚಿತಾ ರಾಮ್ ಅವರ ಮಧುರ ಪ್ರೇಮಕತೆ ಮನಸೆಳೆಯಲಿದೆ. ಜೊತೆಗೆ ಸಿನಿಮಾದಿಂದ ತಾಯಿಯ ಬಗೆಗಿನ ಹಾಡು ಕೂಡ ಹೊರಬಂದಿದ್ದು, ತಾಯಿ ಮಗನ ಮಮತೆಯ ಕತೆ ಕೂಡ ಕಾಣಬಹುದೇನೋ.
ಶಶಿಧರ್ ಕೆ ಎಂ ಅವರು ಬಂಡವಾಳ ಹೂಡುತ್ತಿರುವ ಈ ಸಿನಿಮಾವನ್ನ ಖದರ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಅನೂಪ್ ಸೀಳಿನ ಅವರ ಹಾಡಿನ ಸಂಗೀತ ಹಾಗು ಮಿಸ್ಟರ್ ಎಂ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಈಗಾಗಲೇ ಬಿಡುಗಡೆಯಾದ ಟೀಸರ್ ಒಂದೊಳ್ಳೆ ಆಕ್ಷನ್ ಸಿನಿಮಾ ಇದಾಗಿರಲಿದೆಯೆಂದು ಸಾರುತ್ತಿದ್ದೂ, ಚಿತ್ರದ ಹಾಡುಗಳು ಕೂಡ ಜನಮನ ಸೆಳೆಯುತ್ತಿವೆ. ಇಷ್ಟೆಲ್ಲಾ ನಿರೀಕ್ಷೆ ಹುಟ್ಟಿಸಿರೋ ‘ವೀರಂ’ ಸಿನಿಮಾ ಇದೇ ಏಪ್ರಿಲ್ 7ರಂದು ಬಿಡುಗಡೆಯಾಗಲಿದೆ.

