HomeNews'ವೇದ' ಸಿನಿಮಾಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್: ಶಿವಣ್ಣ ಫುಲ್ ಖುಷ್

‘ವೇದ’ ಸಿನಿಮಾಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್: ಶಿವಣ್ಣ ಫುಲ್ ಖುಷ್

ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿರುವ 125 ನೇ ಸಿನಿಮಾ ಇದಾಗಿದ್ದು ನಿರೀಕ್ಷೆಯಂತೆಯೇ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

ಈ ಸಿನಿಮಾದ ಕಥೆ 2021,1985 ಹಾಗೂ 1965ರ ಕಾಲಘಟ್ಟದಲ್ಲಿ ನಡೆಯುತ್ತದೆ. ಶಿವಣ್ಣ ಅಂದರೆ ‘ವೇದ’ ಫೈಟಿಂಗ್ ಸೀನ್ ನಿಂದಲೇ ಎಂಟ್ರಿ ಕೊಡುತ್ತಾರೆ‌. ಶಿವಣ್ಣನ ಎಂಟ್ರಿಗೆ ಶಿಳ್ಳೆ ಚಪ್ಪಾಳೆ ಬಿದ್ದರೆ, ಇನ್ನು ಸಿನಿಮಾದ ಬಹು ಮುಖ್ಯ ಪಾತ್ರಗಳಾದ ಅದಿತಿ ಸಾಗರ್, ಗಾಣವಿ ಲಕ್ಷ್ಮಣ್ ಶ್ವೇತ ಚಂಗಪ್ಪ ಉಮಾಶ್ರೀ ಅವರ ಪಾತ್ರಗಳು ಪ್ರೇಕ್ಷಕರ ಶ್ಲಾಘನೆಯನ್ನು ಪಡೆದುಕೊಳ್ಳುತ್ತದೆ.

ಇದೊಂದು ರಿವೆಂಜ್ ಸ್ಟೋರಿ. ತಂದೆ ಹಾಗೂ ಮಗಳು ವಿಲನ್ ಗಳನ್ನು ಸಂಹರಿಸುವ ಆ್ಯಕ್ಷನ್ ಕಥೆ.‌ ಹರ್ಷ – ಶಿವಣ್ಣನ ಕಾಂಬಿನೇಷನ್ ಮತ್ತೊಮ್ಮೆ ಸೈ ಎನ್ನಿಸಿಕೊಂಡಿದೆ.

ಶಿವರಾಜ್ ಕುಮಾರ್ ರಾಜ್ಯಾದ್ಯಂತದ ಪ್ರಮುಖ ಥಿಯೇಟರ್ ನಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ಹೌಸ್ ಫುಲ್ ಪ್ರದರ್ಶನ ಕಂಡು ಖುಷ್ ಆಗಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ನಿರ್ಮಾಣ ‌ಮಾಡಿರುವ ‘ವೇದ’ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

RELATED ARTICLES

Most Popular

Share via
Copy link
Powered by Social Snap