ಶಿವರಾಜ್ – ಹರ್ಷ ಕಾಂಬಿನೇಷನ್ ನಲ್ಲಿ ಬರುತ್ತಿರುವ ಬಹು ನಿರೀಕ್ಷಿತ ‘ವೇದ’ ಸಿನಿಮಾದ ಮೊದಲ ಲಿರಿಕಲ್ ಹಾಡು ಬಿಡುಗಡೆ ಆಗಿದೆ.
ಇದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ. ರಕ್ತಸಿಕ್ತ ಅವತಾರದಲ್ಲಿ ಮಚ್ಚು ಹಿಡಿದು ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ ಪೋಸ್ಟರ್ ಮೂಲಕವೇ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದ್ದರು.
ಸಿನಿಮಾದ ಲಿರಿಕಲ್ ಹಾಡು ‘ಗಿಲ್ಲಕ್ಲೋ ಶಿವ’ ರಿಲೀಸ್ ಆಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಮಂಗ್ಲಿ ಅವರು ಪವರ್ ಫುಲ್ ವಾಯ್ಸ್ ನಲ್ಲಿ ಹಾಡಿದ್ದಾರೆ. ಹಸಿರು ಶಾಲು ಹಾಕಿಕೊಂಡು ಮಾಸ್ ಲೀಡರ್ ನಂತೆ ಶಿವಣ್ಣ ಫೈಟ್ ಮಾಡಿ ದುಷ್ಟರ ಸಂಹಾರ ಮಾಡಿರುವುದನ್ನು ಹಾಡಿನಲ್ಲಿ ತೋರಿಸಲಾಗಿದೆ.
ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ಹಾಡನ್ನು ವೀಕ್ಷಿಸಿ ಯಂಗ್ & ಎನರ್ಟಿಟಿಂಗ್ ಶಿವಣ್ಣನ ಲುಕ್ ನ್ನು ಮೆಚ್ಚಿಕೊಂಡಿದ್ದಾರೆ.
ಗೀತಾ ಪಿಕ್ಚರ್ ನಿರ್ಮಾಣದ ‘ವೇದ’ ಇದೇ ಡಿ.23 ರಂದು ರಿಲೀಸ್ ಆಗಲಿದೆ.

