ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ಹರ್ಷ ನಿರ್ದೇಶನದಲ್ಲಿ ʼವೇದʼ ಚಿತ್ರ ಬರುತ್ತಿರುವುದು ಗೊತ್ತೇ ಇದೆ.
ರಕ್ತಸಿಕ್ತ ಪೋಸ್ಟರ್ ನಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ʼವೇದʼ ಸಿನಿಮಾ ತಂಡ ಕೆಲ ದಿನಗಳ ಹಿಂದಷ್ಟೇ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು.
ಈಗ ಮತ್ತೊಂದು ಬಿಗ್ ನ್ಯೂಸ್ ಕೊಟ್ಟಿದೆ.
ಇದೇ ನವೆಂಬರ್ 11 ರಂದು ಸಂಜೆ 7 ಗಂಟೆಗೆ ಟೀಸರ್ ರಿಲೀಸ್ ಆಗಲಿದೆ. ಆ ಮೂಲಕ ಶಿವಣ್ಣನ ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸಿದೆ.
60 ದಶಕದಲ್ಲಿ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ʼವೇದʼದಲ್ಲಿ ಹರ್ಷ ಹೇಳಲಿದ್ದಾರೆ.
ಟೀಸರ್ ರಿಲೀಸ್ ಅನೌನ್ಸ್ ಪೋಸ್ಟರ್ ನಲ್ಲಿ ಮಾಸ್ ಲೀಡರ್ ನಂತೆ ಶಿವಣ್ಣ ಮಚ್ಚು ಹಿಡಿದುಕೊಂಡು ಗರ್ವದಿಂದ ನೋಡುವ ನೋಟವಿದೆ.
ಈ ಹಿಂದಿನ ಪೋಸ್ಟರ್ ನಲ್ಲೂ ಇತರ ಕಲಾವಿದರ ಕೈಯಲ್ಲೂ ಆಯುಧಗಳು ಇರುವುದನ್ನು ಗಮನಿಸಬಹುದು. ಇದೊಂದು ಹಳ್ಳಿ ಜನರ ಹೋರಾಟದ ಕಥೆಯಾಗಿರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಪೋಸ್ಟರ್ ನೋಡಿದರನೇ ಇದೊಂದು ಪಕ್ಕಾ ಮಾಸ್ & ಡಿಫ್ರೆಂಟ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ.
ಗೀತಾ ಶಿವರಾಜ್ ಕುಮಾರ್ ಮೊದಲ ಬಾರಿ ಈ ಸಿನಿಮಾದ ಮೂಲಕ ನಿರ್ಮಾಪಕಿ ಆಗಲಿದ್ದಾರೆ. ಇದರೊಂದಿಗೆ ಜೀ ಸ್ಟುಡಿಯೋಸ್ ಕೂಡ ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ.
ಪಾವನಾ ಗೌಡ, ಗಾನವಿ ಲಕ್ಷ್ಮಣ್, ಉಮಾಶ್ರೀ, ವೀಣಾ ಪೊನ್ನಪ್ಪ, ಚೆಲುವರಾಜ್ ಹಾಗೂ ಶ್ವೇತಾ ಚೆಂಗಪ್ಪ ಚಿತ್ರದಲ್ಲಿ ನಟಿಸಿದ್ದಾರೆ.
ಇದೇ ಡಿಸೆಂಬರ್ 23 ರಂದು ಸಿನಿಮಾ ತೆರೆಗೆ ಬರಲಿದೆ.

