ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಶೀಘ್ರದಲ್ಲೇ ಹಸೆಮಣೆ ಏರಳಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹಬ್ಬಿತ್ತು. ಇಬ್ಬರು ಗಪ್ ಚುಪ್ ಆಗಿ ವಿದೇಶದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈಗ ಚಂದನವನದಲ್ಲಿ ಹಾಟ್ ನ್ಯೂಸ್ ವೊಂದು ಹೊರ ಬಿದ್ದಿದೆ. ಹರಿಪ್ರಿಯಾ – ವಸಿಷ್ಠ ಇಬ್ಬರು ಕುಟುಂಬದ ಆಪ್ತರ ಸುಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಹರಿಪ್ರಿಯಾ ಮನೆಯಲ್ಲಿ ನಿಶ್ಚಿತಾರ್ಥ ನೆರವೇರಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ವಸಿಷ್ಠ ಸಿಂಹ ಅವರ ಹುಟ್ಟು ಹಬ್ಬಕ್ಕೆ ಹರಿಪ್ರಿಯಾ ಅವರು ‘ಹುಟ್ಟುಹಬ್ಬದ ಶುಭಾಶಯಗಳು ಪಾರ್ಟ್ನರ್ ‘ ಬರೆದುಕೊಂಡು ವಿಶ್ ಮಾಡಿದ್ದರು. ಇದೆಲ್ಲವನ್ನು ನೋಡಿದರೆ ವಸಿಷ್ಠ – ಹರಿಪ್ರಿಯಾ ಶೀಘ್ರದಲ್ಲಿ ಹಸೆಮಣೆ ಏರುವುದು ಖಚಿತ ಎನ್ನಲಾಗುತ್ತಿದೆ.
ಇದರ ಬೆನ್ನಲ್ಲೇ ಹರಿಪ್ರಿಯಾ ಸೋಶಿಯಲ್ ಮಿಡಿಯಾದಲ್ಲಿ ಸಿಂಹನ ಕೈಯಲ್ಲಿ ಮುದ್ದಾದ ಹೆಣ್ಣು ಬಾಲೆ ಇರುವ ಫೋಟೋ ಶೇರ್ ಮಾಡಿ, ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು’ ಎಂದು ಕ್ಯಾಪ್ಷನ್ ಬರೆದುಕೊಂಡಿರುವುದು ವೈರಲ್ ಆಗಿದೆ.
ಇಷ್ಟೆಲ್ಲ ಆದರೂ ಇಬ್ಬರೂ ಬಹಿರಂಗವಾಗಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಹೇಳಿಲ್ಲ.

