

ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ ವಸಿಷ್ಠ ಸಿಂಹ – ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದಾಗೆ. ಇತ್ತೀಚೆಗೆ ಎಂಗೇಜ್ ಮಾಡಿಕೊಂಡಿದ್ದ ಜೋಡಿ ಮಾಧ್ಯಮದವರ ಮುಂದೆ ಮದುವೆ ದಿನಾಂಕ ಹಾಗೂ ಮಾಧ್ಯಮ ಮಿತ್ರರಿಗೆ ಮದುವೆ ಆಹ್ವಾನ ನೀಡಿರು.
ಇದೇ ತಿಂಗಳ 26ರಂದು ಮೈಸೂರಿನಲ್ಲಿ ನಾವು ಮದುವೆಯಾಗುತ್ತಿದ್ದೇವೆ. ಆ ಬಳಿಕ ಜ.28 ರಂದುಬೆಂಗಳೂರಿನಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಧ್ಯಮದವರ ಮುಂದೆ ಹೇಳಿ ನೆರೆದಿದ್ದ, ಎಲ್ಲರಿಗೂ ಆಹ್ವಾನ ನೀಡಿದರು. ಈ ವೇಳೆ ಫೋಟೋ, ವಿಡಿಯೋಗಳನ್ನು ದಯವಿಟ್ಟು ಮಾಡಬೇಡಿ ಎಂದು ಕೇಳಿಕೊಂಡರು.
ಇದೇ ವೇಳೆ ತಮ್ಮ ಪ್ರೇಮ ಕಥೆಯನ್ನು ವಸಿಷ್ಠ ಹೇಳಿದರು. ಪ್ರಪೋಸ್ ಮಾಡಿದ್ದೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಸಿಷ್ಠ “‘ಅದು ಹರಿಪ್ರಿಯಾ ಅವರ ತಂದೆಯ ಕಾರ್ಯದ ದಿನ. ಆದಿನ ನಾನು ಹರಿಪ್ರಿಯಾಗೆ ಪ್ರಪೋಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದೆ. ತಡೆಯಲಾರದೇ ಪ್ರಪೋಸ್ ಮಾಡಿದ್ದೆ. ಅದು ಮಧ್ಯರಾತ್ರಿ ಆಗಿತ್ತು. ಮುಂಜಾನೆ ಕಾರ್ಯ ಇದ್ದಿದ್ದರಿಂದ ಅವರು ನಿದ್ದೆ ಮಾಡಬೇಕಿತ್ತು. ನೀವು ಏನೂ ಉತ್ತರಿಸಬಾರದು ಎಂದು ಪ್ರಪೋಸ್ ಮಾಡಿದ್ದೆ, ‘ದೇವ್ರಾಣೆ ನಾಯಿ ಕೊಟ್ಟಿ ಪಟಾಯಿಸಿಕೊಂಡಿಲ್ಲ’ ಎಂದರು.
ಹರಿಪ್ರಿಯಾ ನನ್ನ ಬಾಳಿನಲ್ಲಿ ಒಬ್ಬ ಗೆಳತಿಯಾಗಿ ಬಂದಿದ್ದಲ್ಲ. ಒಬ್ಬ ತಾಯಿ ಸ್ಥಾನದಲ್ಲೂ ಇದ್ದಾರೆ. ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು ಎಂದರು.
ವಸಿಷ್ಠ ಸಿಂಹ ಅವರನ್ನು ಕಂಡರೆ ನನಗೂ ಇಷ್ಟ ಇತ್ತು. ಅದನ್ನು ಹೇಳಿಕೊಳ್ಳಬೇಕು ಎನ್ನುವ ಆಸೆ ನನಗೂ ಇತ್ತು. ನನನ್ನು ವಿಶೇಷವಾಗಿ ನೋಡಿಕೊಂಡರು. ನನ್ನ ತಂದೆ ತೀರಿಕೊಂಡ ದಿನವೇ ಇವರು ನನಗೆ ಸಿಕ್ಕರು. ನನ್ನ ತಂದೆಯೇ ನನಗೆ ಇವರನ್ನು ನೀಡಿದರು ಅನಿಸಿತು’ ಎಂದಿದ್ದಾರೆ ಹರಿಪ್ರಿಯಾ.

