HomeOther Language300 ಕೋಟಿ ಕ್ಲಬ್ ಸೇರಿದ 'ವಾರಿಸು' : ವಿಜಯ್ ಹೊಸ ದಾಖಲೆ ತಂದು ಕೊಟ್ಟ ಸಿನಿಮಾ

300 ಕೋಟಿ ಕ್ಲಬ್ ಸೇರಿದ ‘ವಾರಿಸು’ : ವಿಜಯ್ ಹೊಸ ದಾಖಲೆ ತಂದು ಕೊಟ್ಟ ಸಿನಿಮಾ

ದಳಪತಿ ವಿಜಯ್ ‌ಅವರ ‘ವಾರಿಸು’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಕಾಲಿವುಡ್ ನಲ್ಲಿ ಹಿಟ್ ಚಿತ್ರಗಳ ಸಾಲಿಗೆ ಸೇರಿದೆ.

ಬರೀ ಹಿಟ್ ಮಾತ್ರವಲ್ಲದೆ ‘ವಾರಿಸು’ ಹೊಸ ದಾಖಲೆಯನ್ನೂ ಬರೆದಿದೆ. ಭಾರತದಲ್ಲಿ 214 ಕೋಟಿ ರೂ ಕಲೆಕ್ಷನ್ ಮಾಡಿರುವ ಚಿತ್ರ, ವರ್ಲ್ಡ್ ಬಾಕ್ಸ್ ಆಫೀಸ್‌ ಸೇರಿ 302 ಕೋಟಿ ರೂ ಕಲೆಕ್ಷನ್ ಮಾಡಿದೆ. ಇದು ವಿಜಯ್ ಅವರ ಸಿನಿಮಾವೊಂದು ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವೆನ್ನುವ ದಾಖಲೆಯನ್ನು ಪಡೆದುಕೊಂಡಿದೆ.

ಇದು ವಿಜಯ್ ಅವರ ‘ಬಿಗಿಲ್’ (210 ಕೋ.ರೂ.) ಹಾಗೂ ‘ಮಾಸ್ಟರ್’ 299 (ಕೋ.ರೂ)ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿದೆ.

ತಮಿಳುನಾಡಿನ ಒಂದರಲ್ಲೇ 143.75 ಕೋಟಿ ಗಳಿಕೆ ಕಂಡಿದೆ.‌ಈ ಹಿಂದಿನ‌‌ ಮಾಸ್ಟರ್ , ಬಿಗಿಲ್ ಎರಡು ಸಿನಿಮಾಗಳು ತಮಿಳುನಾಡಿನಲ್ಲಿ 140 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್:

ತಮಿಳುನಾಡು -143.75 ಕೋಟಿ ರೂ.

ಕರ್ನಾಟಕ – 15 ಕೋಟಿ ರೂ.

ಕೇರಳ – 13.40 ಕೋಟಿ ರೂ.

ಆಂಧ್ರ/ತೆಲಂಗಾಣ – 27.25 ಕೋಟಿ ರೂ.

ಭಾರತದ ಉಳಿದ ಭಾಗ  – 14.60 ಕೋಟಿ ರೂ.

ಒಟ್ಟು – 214 ಕೋಟಿ ರೂ.

ವಿಜಯ್‌, ರಶ್ಮಿಕಾ, ಶರತ್‌ಕುಮಾರ್, ಜಯಸುಧಾ, ಪ್ರಕಾಶ್‌ ರಾಜ್‌, ಯೋಗಿ ಬಾಬು ಮುಂತಾದ ಕಲಾವಿದರು ನಟಿಸಿದ್ದಾರೆ.

ಫೆ.22 ರಂದು ‘ವಾರಿಸು’ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.

RELATED ARTICLES

Most Popular

Share via
Copy link
Powered by Social Snap