ಇದೇ ಸೆ.18 ರಂದು ರಿಯಲ್ ಸ್ಟಾರ್ ಅವರು ಹುಟ್ಟುಹಬ್ಬ. ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಲು ಕಾಯುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಉಪೇಂದ್ರ ಅವರು ವಿಭಿನ್ನವಾಗಿ ಆಚರಿಸಲು ರೆಡಿಯಾಗಿದ್ದಾರೆ.
ಅಪ್ಪು ಅಗಲಿಕೆ ಹಾಗೂ ಕೋವಿಡ್ ಕಾರಣದಿಂದ ಸ್ಯಾಂಡಲ್ ವುಡ್ ನಟ – ನಟಿಯರು ತಮ್ಮ ಹಟ್ಟುಹಬ್ಬವನ್ನು ದೊಡ್ಡಮಟ್ಟದಲ್ಲಿ ಆಚರಿಸಿಕೊಂಡಿಲ್ಲ. ಡಾಲಿ ಧನಂಜಯ ಅವರು ತಮ್ಮ ಹುಟ್ಟುಹಬ್ಬವನ್ನು ಅಪ್ಪು ಅವರ ಅಗಲಿಕೆಯ ಕಾರಣದಿಂದ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.


ನಿನ್ನೆ ಕಿಚ್ಚ ಸುದೀಪ್ ಎರಡು ವರ್ಷದ ಬಳಿಕ ಹುಟ್ಟುಹಬ್ಬವನ್ನು ಫ್ಯಾನ್ಸ್ ಗಳ ಜೊತೆಗೆ ಆಚರಿಸಿಕೊಂಡರು.
ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಕೇಕ್ ,ಹಾರ, ಹೂಗುಚ್ಛ ತಂದು ವಿಶ್ ಮಾಡುತ್ತಾರೆ. ವಿಶ್ ಮಾಡಲು ಬರುವ ಅಭಿಮಾನಿಗಳಿಗೆ ಈ ಬಾರಿ ಉಪ್ಪಿ ಸ್ಪೆಷೆಲ್ ಗಿಫ್ಡ್ ಕೊಡಲು ಮುಂದಾಗಿದ್ದಾರೆ.
ಬರ್ತ್ ಡೇ ವಿಶ್ ಮಾಡಲು ಬರುವ ಅಭಿಮಾನಿಗಳು ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಉತ್ತಮ ವಿಚಾರ ಬರೆದು ತರುವಂತೆ ಹೇಳಿದ್ದಾರೆ.
ಈ ಬಗ್ಗೆ ಉಪ್ಪಿ ಟ್ವೀಟ್ ಮಾಡಿದ್ದು, “ವಿಚಾರವಂತರಾಗೋಣಾ ? ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನು ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ.
ಆ ದಿನ ಕೇಕ್, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ʼಯು/ಐʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅವರ ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾದ ಮೇಲೂ ದೊಡ್ಡ ನಿರೀಕ್ಷೆಯಿದೆ.

