‘ಮಯೂರ ಪಿಕ್ಚರ್ಸ್’ ಹಾಗೂ ಸತ್ಯ ಪ್ರಕಾಶ್ ಜೊತೆಗೂಡಿ ನಿರ್ಮಾಣ ಮಾಡಲಿರುವ ಹೊಸ ಚಿತ್ರದ ಟೈಟಲ್ ರಿವೀಲ್ ಆಗಿದೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು.
ದೀಪಕ್ ಮಧುವನಹಳ್ಳಿ ಅವರ ಚಿತ್ರಕ್ಕೆ ‘ಅನ್ ಲಾಕ್ ರಾಘವ‘ ಎಂದು ಟೈಟಲ್ ಇಡಲಾಗಿದ್ದು, ಕಾರಿನ ಮುಂದೆ ಕೀ ಇಟ್ಕೊಂಡು ಮಿಲಿಂದ್ ಸ್ಟೈಲಿಸ್ಟ್ ಆಗಿ ಮಿಂಚಿದ್ದಾರೆ.
ಚಿತ್ರಕ್ಕೆ ಡಿ.ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಾಣದ ಜವಾಬ್ದಾರಿಯನ್ನು ವಹಿಸಲಿದ್ದಾರೆ.
ಇನ್ನು ಚಿತ್ರಕ್ಕೆ ರೆಚೆಲ್ ಡೇವಿಡ್ ನಾಯಕಿಯಾಗಿ ಆಯ್ಕೆಯಾಗಿದ್ದು, ಮಿಲಿಂದ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.


ಈ ಹಿಂದೆ ದೀಪಕ್ ಅವರು ಭಾಗ್ಯ ರಾಜ್’, ‘ರಾಜು ಜೇಮ್ಸ್ ಬಾಂಡ್’, ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.
ಇದೀಗ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಚಿತ್ರದ ಟೈಟಲ್ ಕುತೂಹಲ ಹುಟ್ಟಿಸಿದೆ ಹಾಗೂ ಹೆಚ್ಚಿಸಿದೆ.

