ಉಪೇಂದ್ರ ನಿರ್ದೇಶನದ ‘ಯುಐ’ ಮೇಕಿಂಗ್ ವಿಚಾರಕ್ಕೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಚಿತ್ರ ತಂಡ ಚಿತ್ರೀಕರಣದ ಗ್ಲಿಂಪ್ಸ್ ಮಾಡಿ ಕುತೂಹಲ ಹೆಚ್ಚಿಸಿತು.
ಬಿಗ್ ಬಜೆಟ್ ಸಿನಿಮಾಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಈಗ ನಾಯಕಿ ಯಾರೆಂದು ರಿವೀಲ್ ಆಗಿದೆ. ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಗುರುತಿಸಿಕೊಂಡ ನಟಿ ರೀಷ್ಮಾ ನಾಣಯ್ಯ ‘ಯುಐ’ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಬಾನದಾರಿರೀಷ್ಮಾಯಲ್ಲಿ’ ಸೇರಿದಂತೆ ಮೂರಾಲ್ಕು ಸಿನಿಮಾಗಳಲ್ಲಿ ನಟಿಸಿರುವ ರೀಷ್ಮಾ ಅವರಿಗೆ’ಯುಐ’ ಚಿತ್ರ ದೊಡ್ಡ ಬ್ರೇಕ್ ಕೊಡುವ ಸಾಧ್ಯತೆಯಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತಾನಾಡಿರುವ ಅವರು, ”ನಾನು ಉಪೇಂದ್ರ ಅವರ ಜತೆ ನಾಯಕಿಯಾಗಿ ನಟಿಸುತ್ತಿದ್ದೇನೆ ಎಂಬ ವಿಷಯವೇ ನನಗೆ ಅಚ್ಚರಿ. ಒಂಥರಾ ಶಾಕ್ ನಲ್ಲೇ ಇದೇನೆ. 10 ದಿನಗಳ ಕಾಲ ಅವರ ಜತೆ ಚಿತ್ರೀಕರಣ ಮಾಡಿದ ಮೇಲೆ ಈ ಶಾಕ್‌ನಿಂದ ಹೊರ ಬರುತ್ತೇನೆ ಎನಿಸುತ್ತದೆ. ಇಂತಹ ಒಂದು ಅವಕಾಶ ಪಡೆದುಕೊಂಡ ನಾನು ನಿಜಕ್ಕೂ ಅದೃಷ್ಟವಂತೆ. ಉಪೇಂದ್ರ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು.ಉಪೇಂದ್ರ, ರೀಷ್ಮಾ ನಾಣಯ್ಯ ನಾನು, ಅವರ ದೊಡ್ಡ ಫ್ಯಾನ್. ಈಗ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿದ್ದೇನೆ ಎಂಬುದು ಖುಷಿಯ ಸಂಗತಿ’ ಎನ್ನುತ್ತಾರೆ ರೀಷ್ಮಾ.
‘ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದ, ಲಹರಿ ಫಿಲ್ಸ್, ಶ್ರೀಕಾಂತ್ ಕೆ.ಪಿ ಅವರು ನಿರ್ಮಾಣ ಮಾಡುತ್ತಿದ್ದಾರೆ.

