ಬಹು ಸಮಯದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನಕ್ಕಿಳಿದ ‘ಯುಐ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಲು ಚಿತ್ರ ತಂಡ ಗ್ಲಿಂಪ್ಸ್ ರಿಲೀಸ್ ಮಾಡಿದೆ.
32 ಸೆಕೆಂಡ್ ಗಳ ಈ ಗ್ಲಿಂಪ್ಸ್ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಹೊಸ ವರ್ಷದಂದು ಅಭಿಮಾನಿಗಳಿಗಾಗಿ ಉಪ್ಪಿ ಗ್ಲಿಂಪ್ಸ್ ರಿಲೀಸ್ ಮಾಡಿದ್ದು, ಅತ್ಯಾಧುನಿಕ ಕ್ಯಾಮರಾಗಳ ಬಳಕೆ, ವಿಭಿನ್ನ ಸೆಟ್‌ಗಳು ಗ್ಲಿಂಪ್ಸ್‌ನಲ್ಲಿ ಹೈಲೈಟ್ ಆಗಿ ಕಾಣುತ್ತದೆ. ಈ ವರ್ಷದ ಮಧ್ಯ ಭಾಗದಲ್ಲಿ ಉಪ್ಪಿಯ ಹೊಸ ಅವತಾರ “ಯು/ಐ’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅತ್ತ ಉಪ್ಪಿ ಅವರ ‘ಕಬ್ಜ’ ಚಿತ್ರದ ಟೀಸರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಆ ಚಿತ್ರದ ಮೇಲೂ ಉಪೇಂದ್ರ ಫ್ಯಾನ್ಸ್ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

