ನಮ್ ಟಾಕೀಸ್. ಇನ್ ರೇಟಿಂಗ್ 【 3.5/5 】
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼತ್ರಿಬಲ್ ರೈಡಿಂಗ್ʼ ಇಂದು ರಾಜ್ಯಾದಂತ್ಯ ತೆರೆಗೆ ಬಂದಿದೆ. ಗಣೇಶ್ ಮೂವರು ನಾಯಕಿರೊಂದಿಗೆ ಲವ್ ಜರ್ನಿ ಮಾಡಿರುವ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ನಾಯಕ ರಾಮ್ (ಗಣೇಶ್) ಇಲ್ಲಿ ವೈದ್ಯನಾಗಿ, ಗಾಲ್ಫ್ ಆಟಗಾರ ಹೀಗೆ ಬೇರೆ ಬೇರೆ ಕೆಲಸಗಳನ್ನು ಮಾಡುವ ವ್ಯಕ್ತಿ. ಸದಾ ಹೊಸ ಬಗೆಯ ಸವಾಲುಗಳನ್ನು ಜೀವನದಲ್ಲಿ ಎದುರಿಸುವ ರಾಮ್ ಗೆ ಪ್ರೇಮದ ಅನುಭವವಾಗುತ್ತದೆ. ರಮ್ಯಾ, ರಕ್ಷಿತಾ, ರಾಧಿಕಾರೊಂದಿಗೆ ಪ್ರೀತಿಯಲ್ಲಿ ಬೀಳುವ ರಾಮ್ ಜೀವನವನ್ನು ನಿರ್ದೇಶಕರಿಲ್ಲಿ ಹಾಸ್ಯವಾಗಿಯೇ ಗಂಭೀರತೆಯನ್ನು ಹೇಳಿದ್ದಾರೆ. ಆ ಕಾರಣಕ್ಕಾಗಿ ಚಿತ್ರ ಹೊಸತೆನ್ನಿಸುತ್ತದೆ.
ಆದರೆ ಈ ಹುಡುಗಿಯರಿಂದಲೇ ರಾಮ್ ಬದುಕಿನಲ್ಲಿ ಒಂದು ಮುಖ್ಯವಾದ ಬದಲಾವಣೆ ಆಗುತ್ತದೆ. ಮೂವರಲ್ಲಿ ಯಾರು ರಾಮ್ ಸಿಗುತ್ತಾರೆ. ನಿಜವಾದ ಪ್ರೀತಿಯನ್ನು ರಾಮ್ ಪಡೆಯುತ್ತಾರ ಅನ್ನೋದೇ ಸ್ಟೋರಿ.
ಗಣಿ, ಸಾಧುಕೋಕಿಲ, ರವಿಶಂಕರ್, ರಂಗಾಯಣ ರಘು ಅವರ ಹಾಸ್ಯಕ್ಕೆ ಸಿನಿಮಾದಲ್ಲಿ ಹೆಚ್ಚಿನ ಮಹತ್ವವಿದೆ. ಇದು ಸಿನಿಮಾದ ಪಾಸಿಟಿವ್ ಅಂಶಗಳಲ್ಲೊಂದು. ಸ್ವಲ್ಪ ಬೋರಾಗುತ್ತಿದೆ ಎನ್ನುವಾಗಲೇ ಒಂದಾದ ಮೇಲೊಂದರಂತೆ ಬರುವ ಟ್ವಿಸ್ಟ್ ಗಳು ಪ್ರೇಕ್ಷಕರನ್ನು ಥಿಯೇಟರ್ ನಲ್ಲಿ ಕುತೂಹಲದಿಂದ ಕೂರುವಂತೆ ಮಾಡುತ್ತದೆ.
ರಚನಾ ಇಂದರ್, ಅದಿತಿ ಹಾಗೂ ಮೇಘಾ ಶೆಟ್ಟಿ ಲವ್ ಜರ್ನಿಯ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಶೋಭರಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಸಾಹಸ ದೃಶ್ಯ ಇರದಿದ್ದರೂ ಚಿತ್ರದ ಮೇಲೆ ಅಷ್ಟು ಪರಿಣಾಮ ಬೀರುತ್ತಿರಲಿಲ್ಲ ಏನೋ. ಗಣೇಶ್ ಚಿತ್ರದಲ್ಲಿ ಹಾಡುಗಳು ಯಾವಾಗಲೂ ವಿಶೇಷವಾಗಿರುತ್ತವೆ. ಈ ಚಿತ್ರದಲ್ಲಿ ಹಾಡಿಗೆ ಇನ್ನಷ್ಟು ಮಹತ್ವ ಕೊಟ್ಟಿರಬೇಕಿತ್ತು ಎಂದು ಅನ್ನಿಸುತ್ತದೆ.
ಈ ಅಂಶಗಳನ್ನು ಬಿಟ್ಟರೆ ‘ತ್ರಿಬಲ್ ರೈಡಿಂಗ್’ ಒಂದು ಫನ್ & ಜಾಲಿ ಸಿನಿಮಾ ಎಂದರೆ ತಪ್ಪಾಗದು.

