ಮಹೇಶ್ ಗೌಡ ನಿರ್ದೇಶನದ ‘ತ್ರಿಬಲ್ ರೈಡಿಂಗ್’ ಚಿತ್ರದ ‘ಯಟ್ಟಾ ಯಟ್ಟಾ’ ಹಾಡು ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು.
ಚಂದನ್ ಬರೆದಿರುವ ಈ ಹಾಡನ್ನು ಚಂದನ್ ಹಾಗೂ ಮಂಗ್ಲಿ ಹಾಡಿದ್ದು, ಗಣಿ ಮೂವರು ನಾಯಕಿರೊಂದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಹಾಡಿನ ಬಳಿಕ ಚಿತ್ರ ತಂಡ ಈಗ ಟ್ರೇಲರ್ ರಿಲೀಸ್ ಮಾಡಿದೆ.
ಗಣಿ ಇಲ್ಲಿ ಡಾಕ್ಟರ್ ರಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕಿಯರು ನಾಯಕನ ಹಿಂದೆ ಬೀಳುತ್ತಾರೆ. ಮೂವರಿಗೂ ಮನಸ್ಸು ಕೊಡುವ ರಾಮ್ ಯಾರಿಗೆ ಸಿಗುತ್ತಾನೆ ಅನ್ನೋದೇ ಕಥೆ ಎಂದು ಟ್ರೇಲರ್ ಝಲಕ್ ನಲ್ಲಿ ತೋರಿಸಲಾಗಿದೆ.
ಸಾಧುಕೋಕಿಲಾ, ಕುರಿ ಪ್ರತಾಪ್, ರಂಗಾಯಣ ರಘು, ರವಿಶಂಕರ್ ಅವರ ಪಾತ್ರವನ್ನೂ,ಹಾಸ್ಯವನ್ನು ತೋರಿಸಲಾಗಿದೆ.
ಗಣೇಶ್ ಎಮೋಷನಲ್ ನಟನೆ, ಪಂಚಿಂಗ್ ಡೈಲಾಗ್ಸ್ ಹಾಗೂ ವಿರಹ ಪ್ರೇಮಿಯಾಗಿಣ ಆ್ಯಕ್ಷನ್ ಹೀರೋ ಆಗಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ.
2.1 ಮಿಲಿಯನ್ ಗೂ ಅಧಿಕ ಮಂದಿ ಟ್ರೇಲರನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಟ್ರೆಂಡಿಂಗ್ ನಂ.1 ಟ್ರೇಲರ್ ಇದೆ.
ಮೇಘಾ ಶೆಟ್ಟಿ, ರಚನಾ ಇಂದರ್,ಅದಿತಿ ಪ್ರಭುದೇವ ಮೂವರು ನಾಯಕಿಯರೊಂದಿಗೆ ಗಣಿ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ರಂಗಾಯಣ ರಘು,ಅಚ್ಚುತ್ ಕುಮಾರ್, ಶೋಭರಾಜ್, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಸಿನಿಮಾದಲ್ಲಿದೆ.
ರಾಮ್ ಗೋಪಾಲ್ ಅವರು ಸಿನಿಮಾಕ್ಕೆ ಬಂಡವಾಳ ಹಾಕಿದ್ದು, ಮಹೇಶ್ ಗೌಡ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ 25 ರಂದು ಸಿನಿಮಾ ತೆರೆಗೆ ಬರಲಿದೆ.

