ಕನ್ನಡ ಚಿತ್ರರಂಗದ ವಿಭಿನ್ನ ಹಾಗು ವಿಶೇಷ ಕಲಾವಿದರಲ್ಲಿ ರಾಜ್ ಬಿ ಶೆಟ್ಟಿ ಮುಂಚೂಣಿಯಲ್ಲಿ ಬರುವವರು. ‘ಒಂದು ಮೊಟ್ಟೆಯ ಕಥೆ’ ಮೂಲಕ ನಟ ಹಾಗು ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟು ನಂತರ ಹಲವು ಸಿನಿಮಾಗಳಲ್ಲಿ ನಟಿಸುತ್ತಾ, ‘ಗರುಡ ಗಮನ ವೃಷಭ ವಾಹನ’ ಎಂಬ ಅವರಿಂದ ಯಾರು ಊಹಿಸಿರದಂತಹ ಒಂದು ಆಕ್ಷನ್ ಸಿನಿಮಾವನ್ನ ಕನ್ನಡಿಗರಿಗೆ ನೀಡಿದವರು ನಮ್ಮ ರಾಜ್ ಶೆಟ್ರು. ಬಹುಪಾಲು ಇಡೀ ಭಾರತೀಯ ಸಿನಿರಂಗದ ಸಿನಿಪ್ರೇಮಿಗಳು ಕೊಂಡಾಡುವಂತಹ ಸಿನಿಮಾವಾಗಿ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ರಿಷಬ್ ಶೆಟ್ಟಿ ಹಾಗು ರಾಜ್ ಬಿ ಶೆಟ್ಟಿ ಅವರು ನಟಿಸಿದ ‘ಗರುಡ ಗಮನ ವೃಷಭ ವಾಹನ’ ಹೊರಹೊಮ್ಮಿತು. ಇದೀಗ ಅದರ ನಂತರ ರಾಜ್ ಬಿ ಶೆಟ್ಟಿ ಅವರು ಮತ್ತೊಂದು ಪಕ್ಕ ಆಕ್ಷನ್ ಸಿನಿಮಾದೊಂದಿಗೆ ಬರಲು ಸಿದ್ದರಾಗಿದ್ದಾರೆ. ಅದುವೇ ‘ಟೋಬಿ’!


ರಾಜ್ ಬಿ ಶೆಟ್ಟಿಯವರೇ ಬರೆದಿರುವ ಈ ‘ಟೋಬಿ’ಯ ಕಥೆಯನ್ನ ಬೇಸಿಲ್ ಅಚಲಕ್ಕಲ್ ಅವರು ನಿರ್ದೇಶನ ಮಾಡಿದ್ದು, ರಾಜ್ ಶೆಟ್ರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಜೂನ್ 13ರಂದು ಮೋಶನ್ ಪೋಸ್ಟರ್ ಒಂದರ ಮೂಲಕ ಈ ಸಿನಿಮಾವನ್ನ ಘೋಷಣೆ ಮಾಡಿದ್ದ ತಂಡ ಜೊತೆಯಲ್ಲಿಯೇ ಚಿತ್ರದ ಬಿಡುಗಡೆ ದಿನಾಂಕವನ್ನ ಕೂಡ ಅನಾವರಣ ಮಾಡಿತ್ತು. ಆಗಸ್ಟ್ 25ರಂದು ‘ಟೋಬಿ’ ಎಲ್ಲೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಈ ತಿಂಗಳ ಅಂತ್ಯಕ್ಕೆ, ಅಂದರೇ ಇನ್ನು ಕೇವಲ ಒಂದು ವಾರದ ಒಳಗಾಗಿ ‘ಟೋಬಿ’ ಚಿತ್ರದ ಫಸ್ಟ್ ಲುಕ್ ಅನ್ನು ಹೊರಬಿಡುವುದಾಗಿ ರಾಜ್ ಬಿ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.
ಹೊರಬಿದ್ದಿರುವ ಮೋಶನ್ ಪೋಸ್ಟರ್ ನಲ್ಲಿರುಬ ಮಿಧುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತಕ್ಕೆ ಎಲ್ಲೆಡೆ ಬಾರೀ ಪ್ರಶಂಸೆ ಕೇಳಿ ಬರುತ್ತಿದೆ. ‘ಮಾರಿಗೆ ದಾರಿ’ ಎನ್ನುವ ಈ ಟ್ರ್ಯಾಕ್ ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ಸಂಯುಕ್ತ ಹೊರನಾಡ್ ಹಾಗು ಚೈತ್ರ ಜೆ ಆಚಾರ್ ಅವರು ‘ಟೋಬಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್ 25ರಂದು ಥೀಯೇಟರ್ ಗಳಲ್ಲಿ ಬಿಡುಗಡೆಯಾಗಲಿರುವ ‘ತೊಬ್ಯ್’ಯ ಫಸ್ಟ್ ಲುಕ್ ಈ ಜೂನ್ ತಿಂಗಕಾ ಅಂತ್ಯದ ಒಳಗಾಗಿ ಹೊರಬೀಳಲಿದೆ. ಹೀಗೆಂದು ತಮ್ಮ ಸಿನಿಮಾ ಘೋಷಣೆಗೆ ಸಿಕ್ಕಂತಹ ಪ್ರಶಂಸೆಗೆ ಧನ್ಯವಾದ ತಿಳಿಸುತ್ತಾ ರಾಜ್ ಬಿ ಶೆಟ್ಟಿಯವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

