HomeNewsರಜಿನಿಕಾಂತ್ ಜೈಲರ್ ಗೆ ಪೈಪೋಟಿ ನೀಡಲು ಬರುತ್ತಿದೆ ಕನ್ನಡದ ತೋತಾಪುರಿ 2

ರಜಿನಿಕಾಂತ್ ಜೈಲರ್ ಗೆ ಪೈಪೋಟಿ ನೀಡಲು ಬರುತ್ತಿದೆ ಕನ್ನಡದ ತೋತಾಪುರಿ 2


ಸೂಪರ್‌ಸ್ಟಾಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿಿತ ‘ಜೈಲರ್’ ಚಿತ್ರ ಆಗಸ್‌ಟ್‌ 10 ರಂದು ತೆರೆಕಾಣುತ್ತಿಿದೆ. ಈ ಕಾರಣದಿಂದಲೇ ಆಗಸ್‌ಟ್‌ 11ರಂದು ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯನ್ನು ಅನೌನ್‌ಸ್‌ ಮಾಡಿರಲಿಲ್ಲ. ಆದರೆ, ಈಗ ಕನ್ನಡ ಚಿತ್ರವೊಂದು ಜೈಲರ್ ಮುಂದೆ ಬರಲು ರೆಡಿಯಾಗಿದೆ. ಅದು ‘ತೋತಾಪುರಿ-2’ ಚಿತ್ರ.

ಹೌದು ಜಗ್ಗೇಶ್-ಧನಂಜಯ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ಆಗಸ್‌ಟ್‌‌ನಲ್ಲಿ ತೆರೆಕಾಣುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಆಗಸ್‌ಟ್‌ 11ರಂದು ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿಿದೆ. ಈ ಬಗ್ಗೆೆ ಮಾತನಾಡುವ ನಿರ್ಮಾಪಕ ಸುರೇಶ್, ‘ನಾವು ಆಗಸ್‌ಟ್‌ ಎರಡನೇ ವಾರ ಬರಲು ತಯಾರಿ ಮಾಡಿಕೊಳ್ಳುತ್ತಿಿರುವುದು ನಿಜ’ ಎನ್ನುತ್ತಾಾರೆ.
‘ತೋತಾಪುರಿ-2’ನಲ್ಲಿ ಜಗ್ಗೇಶ್ ಜೊತೆಗೆ ಧನಂಜಯ್ ಅವರಿಗೂ ಪ್ರಮುಖ ಪಾತ್ರವಿದೆ. ಇಲ್ಲಿ ಸುಮನ್ ರಂಗನಾಥ್ ಕೂಡಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾಾರೆ.


ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್ ಹಾಡು ಸೂಪರ್ ಹಿಟ್ ಆಗಿತ್ತು. ರೊಮ್ಯಾಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಲಕ್ಷಾಂತರ ಹಿಟ್‌ಸ್‌ ದಾಖಲಾಗಿತ್ತು. ಇದೀಗ ‘ತೋತಾಪುರಿ-2 ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಎಲ್ಲೆೆಡೆ ಸದ್ದು ಮಾಡುತ್ತಿಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಹಾಡು ಮೋಡಿ ಮಾಡುತ್ತಿಿರೋದು ವಿಶೇಷ.


ಹೃದಯಶಿವ ಸಾಹಿತ್ಯ ರಚಿಸಿರುವ ‘ಮೊದಲ ಮಳೆ ಮನದೊಳಗೆ… ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡು ಮಾಡುತ್ತಿಿದೆ. ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್ ಹೆಗ್ಡೆೆ ಕಂಠಸಿರಿಯಲ್ಲಿ ‘ಮಳೆ ಹಾಡು ಮೂಡಿಬಂದಿದೆ.ಈ ಮೆಲೋಡಿ ಹಾಡಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿಿದೆ.

RELATED ARTICLES

Most Popular

Share via
Copy link
Powered by Social Snap