HomeFans Celebrationಡಿ ಬಾಸ್ ಅಭಿಮಾನಿಗಳಿಂದ 'ತೂಗುದೀಪ ಕ್ರಿಕೆಟ್ ಲೀಗ್' : ನಾಳೆಯಿಂದ ಎರಡು ದಿನ ಕ್ರಿಕೆಟ್ ಹಬ್ಬ

ಡಿ ಬಾಸ್ ಅಭಿಮಾನಿಗಳಿಂದ ‘ತೂಗುದೀಪ ಕ್ರಿಕೆಟ್ ಲೀಗ್’ : ನಾಳೆಯಿಂದ ಎರಡು ದಿನ ಕ್ರಿಕೆಟ್ ಹಬ್ಬ

ಡಿ ಬಾಸ್ ದರ್ಶನ್ ಸಿನಿರಂಗಕ್ಕೆ ಬಂದು ಇತ್ತೀಚೆಗೆ 25 ವರ್ಷಗಳು ತುಂಬಿವೆ. ದರ್ಶನ್ ಹುಟ್ಟು ಹಬ್ಬಕ್ಕೆ ಹಾಗೂ ವಿಶೇಷವಾದ ದಿನಗಳಿಗೆ ದಾಸನ ಅಭಿಮಾನಿಗಳು ಸಮಾಜ ಸೇವೆ, ರಕ್ತದಾನ ಹಾಗೂ ಇತರ ಕೆಲಸ – ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ.

ಚಾಲೇಜಿಂಗ್ ಸ್ಟಾರ್ ಅಭಿಮಾನಿಗಳು ‘ತೂಗುದೀಪ್ ಕ್ರಿಕೆಟ್ ಲೀಗ್’ ಮೂಲಕ ಕ್ರಿಕೆಟ್ ಹಬ್ಬವನ್ನು ಮಾಡಲು ರೆಡಿಯಾಗಿದ್ದಾರೆ. ಇದು ಎರಡನೇ ವರ್ಷದ ಪಂದ್ಯಾಕೂಟ.


ದರ್ಶನ್ ಅಭಿಮಾನಿಗಳನ್ನೊಳಗೊಂಡ 8 ತಂಡಗಳು, 8. ಓವರ್ ನ ಪಂದ್ಯದಲ್ಲಿ ಟ್ರೋಫಿಗಾಗಿ ಹಣಾಹಣೆ ‌ನಡೆಸಲಿದೆ.


ಎ,ಬಿ ಎನ್ನುವ ಎರಡು ಗ್ರೂಪಿನಲ್ಲಿ ತಲಾ 4-4 ತಂಡಗಳಿವೆ. ರಾಯಣ್ಣ ರಾಯಲ್ಸ್, ನವಗ್ರಹ ರೂಲರ್ಸ್, ಚಕ್ರವರ್ತಿ ಚಾಲೇಜರ್ಸ್, ಸಾರಥಿ ಸುಲ್ತಾನ್ಸ್ ತಂಡಗಳ ಎ ಗ್ರೂಪಿನಲ್ಲಿದ್ದರೆ , ಬಿ ಗ್ರೂಪ್ ನಲ್ಲಿ ಯಜಮಾನ ಬ್ಲ್ಯಾಸ್ಟರ್ಸ್, ಗಜ ಗ್ಯಾಂಗ್ ಸ್ಟರ್ಸ್, ದತ್ತ ವಾರಿಯರ್ಸ್‌, ಕ್ರಾಂತಿ ಸೋಲ್ಜರ್ಸ್ ತಂಡಗಳಿವೆ.

ಆ.‌ 13-14 ಅಂದರೆ ಇದೇ ಶನಿವಾರ – ಭಾನುವಾರ ಬಿಜಿಎಸ್ ಕ್ರೀಡಾಂಗಣ ವಿಜಯನಗರ, ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪಂದ್ಯಾಟಕ್ಕೆ ಚಾಲನೆ ಸಿಗಲಿದೆ.

RELATED ARTICLES

Most Popular

Share via
Copy link
Powered by Social Snap