HomeNewsಹಸೆಮಣೆ ಏರಿದ 'ಹರಿಕಥೆ ಅಲ್ಲ ಗಿರಿಕಥೆ' ನಾಯಕಿ! ಫೋಟೋ ಹಂಚಿಕೊಂಡ ಕೂರ್ಗ್ ಬ್ಯೂಟಿ!

ಹಸೆಮಣೆ ಏರಿದ ‘ಹರಿಕಥೆ ಅಲ್ಲ ಗಿರಿಕಥೆ’ ನಾಯಕಿ! ಫೋಟೋ ಹಂಚಿಕೊಂಡ ಕೂರ್ಗ್ ಬ್ಯೂಟಿ!

ನಟ ನಿರ್ದೇಶಕ ರಿಷಬ್ ಶೆಟ್ಟು ಅವರು ನಾಯಕನಾಗಿ ನಟಿಸಿದ ಸೂಪರ್ ಹಿಟ್ ಕಾಮಿಡಿ ಚಲನಚಿತ್ರ ‘ಹರಿಕಥೆ ಅಲ್ಲ ಗಿರಿಕಥೆ’. ವಿಭಿನ್ನ ಕಥಾಹಂದರ ಹೊಂದಿದ್ದ ಈ ಸಿನಿಮಾ, ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಪಾತ್ರವರ್ಗ ಕೂಡ ಅಷ್ಟೇ ಹೆಸರು ಮಾಡಿತ್ತು. ಇವರಲ್ಲಿ ಹೆಚ್ಚು ಕನ್ನಡಿಗರ ಮೆಚ್ಚುಗೆ ಗಳಿಸಿದ್ದು ನಾಯಕಿ ಕೂರ್ಗ್ ಬ್ಯೂಟಿ ತಪಸ್ವಿನಿ ಪೂಣಚ್ಚ. ಸದ್ಯ ಈ ನಟಿ ಇದೀಗ ಹಸೆಮಣೆ ಏರಿದ್ದಾರೆ. ಈ ಸಂತಸದ ಕ್ಷಣದ ಫೋಟೋಗಳನ್ನ ನಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು, ಜೂನ್ ನಲ್ಲಿ ನಟಿ ತಪಸ್ವಿನಿ, ರಕ್ಷತ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ, ಕೊಡಗಿನ ಸಂಪ್ರದಾಯದಂತೆ ಮದುವೆ ಕಾರ್ಯಗಳು ನಡೆದಿದ್ದು, ಸುಮಾರು ಒಂದು ತಿಂಗಳ ನಂತರ ತಪಸ್ವಿನಿ ಈ ಶುಭಗಳಿಗೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೊಡಗಿನ ಸಂಪ್ರದಾಯಕ ಉಡುಗೆಯಲ್ಲಿ ವಧು ವರರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಹರಿಕಥೆ ಅಲ್ಲ ಗಿರಿಕಥೆ ಮೂಲಕ ಜನಪ್ರಿಯತೆ ಗಳಿಸಿದ ತಪಸ್ವಿನಿ ಪೂಣಚ್ಚ ಅವರು, ಸದ್ಯ ರಾಜವರ್ಧನ್ ನಟನೆಯ ‘ಗಜರಾಮ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ಸದ್ಯ ಈ ನವವಿವಾಹಿತರಿಗೆ ಶುಭವಾಗಲಿ ಎಂದು ಅಭಿಮಾನಿಗಳು ಹರಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap