ಕೆಜಿಎಫ್ -2 ನಲ್ಲಿ ‘ಅಧೀರ’ನಾಗಿ ಅಬ್ಬರಿಸಿದ ಸಂಜು ಈಗ ಖಳನಾಯಕನಾಗಿ ಮತ್ತೊಮ್ಮೆ ಕನ್ನಡದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೋಗಿ ಪ್ರೇಮ್ – ಧ್ರುವ ಸರ್ಜಾ ಕಾಂಬಿನೇಷನ್ ನ ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ನಟಿಸುತ್ತಿರುವುದು ಗೊತ್ತೇ ಇದೆ. ಈ ವಿಚಾರ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ಹೈಪ್ ಹೆಚ್ಚಿಸಿದೆ.
ಇತ್ತೀಚೆಗಷ್ಟೇ ‘ಅಧೀರ’ ಶೂಟಿಂಗ್ ಸ್ಪಾಟ್ ಗೆ ಬರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಚಿತ್ರ ತಂಡದೊಂದಿಗೆ ಬೆರೆತು ಪಾರ್ಟಿ ಮಾಡಿರುವ ಫೋಟೋಗಳು ಸದ್ದು ಮಾಡುತ್ತಿದೆ.


‘ಕೆಡಿ’ ಚಿತ್ರ ತಂಡದವರ ಜೊತೆ ಸಂಜಯ್ ದತ್ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಈ ಕುರಿತಾದ ಫೋಟೋಗಳನ್ನು ನಟಿ ರಕ್ಷಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಅತ್ಯಂತ ಸ್ಮರಣೀಯ’ ಕ್ಷಣ’ವೆಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಕೆಜಿಎಫ್ -2 ಬಳಿಕ ಸಂಜಯ್ ದತ್ ಅವರನ್ನು ಮತ್ತೊಂದು ಕನ್ನಡ ಸಿನಿಮಾದಲ್ಲಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಪ್ರೇಮ್, ರಕ್ಷಿತಾ, ‘ಏಕ್ ಲವ್ ಯಾ’ ನಟ ರಾಣಾ, ‘ಬನಾರಸ್’ ಸಿನಿಮಾ ಖ್ಯಾತಿಯ ಝೈದ್ ಖಾನ್ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ.

