ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಹೈದರಾಬಾದ್ ತಲುಪಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧ ಮೂರು ಏಕದಿನ ಪಂದ್ಯವನ್ನು ಆಡಲಿದ್ದು, ಆ ಮೂಲಕ ಏಕದಿನ ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆಸಲಿದೆ.
ಹೈದರಾಬಾದ್ ತಲುಪಿದ ಟೀಮ್ ಇಂಡಿಯಾ ಆಟಗಾರರು ತೆಲುಗು ನಟವ ಜೂ.ಎನ್.ಟಿ.ಆರ್ ಅವರನ್ನು ಭೇಟಿಯಾಗಿ ಫೋಟೋ ಹಂಚಿಕೊಂಡಿದೆ.
ಯಾದವ್ ಮತ್ತು ಚಾಹಲ್ ಜೊತೆಗೆ, ಶುಭ್‌ಮನ್ ಗಿಲ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಠಾಕೂರ್ ‘ಆರ್ ಆರ್ ಆರ್’ ನಟನ ಜೊತೆ ನಿಂತು ಪೋಸ್ ಕೊಟ್ಟು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಅಭಿನಂದಿಸಿದ್ದಾರೆ.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

