HomeSportsಆರಂಭವಾಗುತ್ತಿದೆ ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ನ ಮಹಿಳಾ ಆವೃತ್ತಿ: 'ವುಮೆನ್ ಪ್ರೀಮಿಯರ್ ಲೀಗ್'

ಆರಂಭವಾಗುತ್ತಿದೆ ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ನ ಮಹಿಳಾ ಆವೃತ್ತಿ: ‘ವುಮೆನ್ ಪ್ರೀಮಿಯರ್ ಲೀಗ್’

‘ಇಂಡಿಯನ್ ಪ್ರೀಮಿಯರ್ ಲೀಗ್’ ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಪ್ರಖ್ಯಾತವಾಗಿರುವ ಸರಣಿ. ಇಡೀ ವಿಶ್ವದ ತುಂಬಾ ಅಸಂಖ್ಯ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯನ್ನು ಅನುಸರಿಸುತ್ತಾರೆ. ಈ ಸಾಲಿನ ವಿಶೇಷತೆಯೆಂದರೆ ಅದು ‘ಮಹಿಳಾ ಪ್ರೀಮಿಯರ್ ಲೀಗ್’. ಹೌದು ಈ ಬಾರಿಯಿಂದ ಐದು ತಂಡಗಳನ್ನ ಒಳಗೊಂಡ ‘ವುಮೆನ್ ಪ್ರೀಮಿಯರ್ ಲೀಗ್’ ಆರಂಭವಾಗುತ್ತಿದೆ. ಈ ವರ್ಷದ ಪಂದ್ಯಾಟ ಇದೆ ಮಾರ್ಚ್ 31ಕ್ಕೆ ಆರಂಭವಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ‘ಮಹಿಳಾ ಪ್ರೀಮಿಯರ್ ಲೀಗ್’ ನಡೆಯಲಿದ್ದು, ಇಂದು(ಮಾರ್ಚ್ 4) ಈ ಪಂದ್ಯಾಟದ ಉದ್ಘಾಟನ ಪಂದ್ಯ ನಡೆಯಲಿದೆ.

ಮೊದಲ ಬಾರೀ ನಡೆಯುತ್ತಿರುವ ‘ವುಮೆನ್ ಪ್ರೀಮಿಯರ್ ಲೀಗ್’ ಗೆ ಹರಾಜು ಪ್ರಕ್ರೀಯೆ ಕೂಡ ಭರ್ಜರಿಯಾಗಿ ನಡೆದಿತ್ತು. ಭಾರತೀಯ ಮಹಿಳಾ ಕ್ರಿಕೆಟಿಗರ ಜೊತೆಗೆ ವಿವಿಧ ದೇಶಗಳ ಅಂತರ್ರಾಷ್ಟ್ರೀಯ ಮಹಿಳಾ ಕ್ರೀಡಾಳುಗಳು ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್’,’ಮುಂಬೈ ಇಂಡಿಯನ್ಸ್ ವುಮೆನ್’,’ಗುಜರಾತ್ ಜಯಂಟ್ಸ್’, ‘ಯು ಪಿ ವಾರಿಯರ್ಸ್’ ಹಾಗು ‘ದೆಲ್ಲಿ ಕ್ಯಾಪಿಟಲ್ಸ್ ವುಮೆನ್’ ಇವು ಮೊದಲ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುತ್ತಿರುವ ಐದು ತಂಡಗಳು. ಇಂದು(ಮಾರ್ಚ್ 4) ‘ಗುಜರಾತ್ ಜಯಂಟ್ಸ್’ ತಂಡ ‘ಮುಂಬೈ ಇಂಡಿಯನ್ಸ್ ವುಮೆನ್’ ತಂಡದ ಜೊತೆ ಆಡುವ ಮೂಲಕ ‘ವುಮೆನ್ ಪ್ರೀಮಿಯರ್ ಲೀಗ್’ ನ ಮೊದಲ ಪಂದ್ಯಕ್ಕೆ ಜೀವನ ತುಂಬಲಿದ್ದಾರೆ.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್’ ತಂಡದ ಪರವಾಗಿ ಭಾರತದ ಹೆಸರಾಂತ ಆಟಗಾರ್ತಿ ಸ್ಮೃತಿ ಮಂದಣ್ಣ ಅವರು ತಂಡದ ನಾಯಕತ್ವ ವಹಿಸಿದರೆ, ‘ಮುಂಬೈ ಇಂಡಿಯನ್ಸ್ ವುಮೆನ್’ ಪರವಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕಿಯಾಗಿರುವ ಹರ್ಮನ್ ಪ್ರೀತ್ ಅವರು ನಾಯಕರಾಗಿದ್ದಾರೆ. ಇನ್ನು ಆಸ್ಟ್ರೇಲಿಯಾ ಮಹಿಳಾ ತಂಡದ ಪ್ರಖ್ಯಾತ ಆಟಗಾರ್ತಿಯರಾದ ಬೆತ್ ಮೂನಿ, ಅಲಿಸಾ ಹೀಲಿ, ಹಾಗು ಮೆಗ್ ಲ್ಯಾನಿಂಗ್ ಅವರು ಕ್ರಮವಾಗಿ ‘ಗುಜರಾತ್ ಜಯಂಟ್ಸ್’,’ಯುಪಿ ವಾರಿಯರ್ಸ್’ ಹಾಗು ‘ದೆಲ್ಲಿ ಕ್ಯಾಪಿಟಲ್ಸ್’ ತಂಡವನ್ನ ಮುನ್ನಡೆಸಲಿದ್ದಾರೆ. ಇಂದು (ಮಾರ್ಚ್ 4) ಗುಜರಾತ್ ಜಯಂಟ್ಸ್ ಹಾಗು ಮುಂಬೈ ಇಂಡಿಯನ್ಸ್ ವುಮೆನ್’ ತಂಡದ ನಡುವಣ ಪಂದ್ಯದ ಮೂಲಕ ಶುಭರಂಭ ಕಾಣಲಿರೋ ಈ ಪಂದ್ಯಾಟ, ಇದೇ ಮಾರ್ಚ್ 26ರಂದು ನಡೆಯಲಿರೋ ಫೈನಲ್ ಪಂದ್ಯದ ಜೊತೆಗೆ ಅಂತ್ಯ ಕಾಣಲಿದೆ. ಈ ಪಂದ್ಯಕೂಟದ ಎಲ್ಲಾ ಪಂದ್ಯಗಳು ಮುಂಬೈ ನ ‘ಡಿ ವೈ ಪಾಟೀಲ್ ಸ್ಟೇಡಿಯಂ’ ಹಾಗು ‘ಬ್ರಬೋರ್ನ್ ಸ್ಟೇಡಿಯಂ’ ನಲ್ಲೆ ನಡೆಯಲಿವೆ.ಈ ಮೊದಲ ವರ್ಷದ ‘ವುಮೆನ್ ಪ್ರೀಮಿಯರ್ ಲೀಗ್’ ಸದ್ಯ ಎಲ್ಲರ ಗಮನವಿರುವಂತಹ ವಿಚಾರವಾಗಿದೆ.

RELATED ARTICLES

Most Popular

Share via
Copy link
Powered by Social Snap