ಅ.21 ರಂದು ಡಾಲಿ ಅವರ ಅಂಡರ್ ವರ್ಲ್ಡ್ ಕಥೆವುಳ್ಳ ‘ಹೆಡ್ ಬುಷ್’ ಚಿತ್ರ ರಿಲೀಸ್ ಆಗಲಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ ಭರ್ಜರಿ ಸದ್ದು ಮಾಡುತ್ತಿದೆ.
ದಾವಣಗೆರೆಯಲ್ಲಿ ಪ್ರೀ – ರಿಲೀಸ್ ಇವೆಂಟ್ ನಡೆಯಿತು. ರಚಿತಾ ರಾಮ್, ಮೋಹಕ ತಾರೆ ರಮ್ಯಾ, ಅಮೃತಾ ಅಯ್ಯರ್ ಸೇರಿದಂತೆ ಹತ್ತಾರು ಗಣ್ಯರು, ಸಾವಿರಾರು ಅಭಿಮಾನಿಗಳು ಸೇರಿದ್ದರು. ಎಲ್ಲರ ಸಮ್ಮುಖದಲ್ಲಿ ಅದ್ದೂರಿ ಪ್ರೀ ರಿಲೀಸ್ ಇವೆಂಟ್ ನಡೆಯಿತು.
ಈ ಸಮಾರಂಭದಲ್ಲಿ ಡಾಲಿ ಸಿನಿಮಾದ ಬಗ್ಗೆ ಮಾತಾನಾಡುತ್ತಾ, ತಮ್ಮ ಸಿನಿ ಪಯಣದಲ್ಲಿ ‘ಟಗರು’ ಸಿನಿಮಾ ಕೊಟ್ಟ ಖ್ಯಾತಿಯ ಬಗ್ಗೆ ಪ್ರಸ್ತಾಪಿಸಿ ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಿ ವೇದಿಕೆಯಲ್ಲೇ ಮೋಷನ್ ಪಿಕ್ಚರ್ ರಿಲೀಸ್ ಮಾಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾವನ್ನು ಡಾಲಿ ಅವರೇ ನಿರ್ಮಾಣ ಮಾಡಲಿದ್ದಾರೆ.
‘ಟಗರ್ ಪಲ್ಯ’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದ್ದು. ಗೀತಾ ಶಿವರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ, ಅಪ್ಪು ಅವರ ನೆನಪಿನೊಂದಿಗೆ ಎಂದು ಮೋಷನ್ ಪಿಕ್ಚರ್ ನಲ್ಲಿ ಹಾಕಿದ್ದು, ಕಾಡಿನ ಮಾರ್ಗದಲ್ಲಿ ‘ಟಗರು ಪಲ್ಯ’ ಸಾಗುತ್ತದೆ. ಟಪ್ಪಂಗುಚ್ಚಿ ಡೊಳ್ಳು ಸದ್ದು ಕೇಳುತ್ತದೆ. ಮೇಲ್ನೋಟಕ್ಕೆ ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆಯಾಗಿ ಕಾಣುತ್ತದೆ.
ಉಮೇಶ್ ಕೆ ಕೃಪ ಅವರು ನಿರ್ದೇಶನ ಮಾಡಲಿದ್ದಾರೆ. ಶೀಘ್ರದಲ್ಲಿ ಶೂಟಿಂಗ್ ಆರಂಭಗೊಳ್ಳಲಿದೆ.
ಇದಕ್ಕೂ ಮೊದಲು ಡಾಲಿ ಅವರ ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರ ತೆರೆಗೆ ಬರಲಿದೆ.

